Advertisement

ಸುಳ್ಯ:ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ರಿಂದ ಮೇ.2 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ಹಾಗೂ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸಿದರು. ಕಾರ್ನರ್ ಮೀಟಿಂಗ್‌ಗಳನ್ನು ನಡೆಸಿದರು.
ಸುಳ್ಯ ನಗರದ ಬೂಡು, ಕೇರ್ಪಳ, ಕುರುಂಜಿಬಾಗ್ ಭಸ್ಮಡ್ಕ ಅದಲ್ಲದೆ ನೆಲ್ಲಿಕುಮೇರಿ, ದೊಡ್ಡಡ್ಕ, ರಾಜರಾಮಪುರ ಕಾಲೋನಿ ಮನೆ-ಮನೆ ಪ್ರಚಾರ ನಡೆಸಿದರು.ಕೊನಾಲು, ಶಾಂತಿನಗರ ಅಲಂಕಾರು ಗೊಳಿತೊಟ್ಟು ಎಂಬಲ್ಲಿ ಕೂಡಾ ಕಾರ್ನರ್ ಸಭೆ ನಡೆಸಿ ಆಮ್ ಆದ್ಮಿ ಪಕ್ಷದ ಕುರಿತು ಮಾಹಿತಿ‌ ನೀಡಿ ಮತಯಾಚಿಸಲಾಯಿತು.

ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ರಾಜ್ಯ ಉಪಾಧ್ಯಕ್ಷ ವಿವೇಕಾನಂದ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ಪ್ರತಾಪ್ ರೈ, ವಸಂತ, ಸಿಂಚನ, ಸಂಶುದ್ದೀನ್ ಕೆ.ಎಂ, ಸುರೇಶ್ ಮುಂಡಕಜೆ ಮತ್ತಿತರರು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ