ಸುಳ್ಯ: ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮೇ.8 ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರದಾದ್ಯಂತ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಾಯಿತು. ಸುಳ್ಯ ನಗರದಲ್ಲಿ ತೆರೆದ ವಾಹನದಲ್ಲಿ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪ್ರಯಾಣಿಸಿ ಮತದಾರರನ್ನು, ಸಾರ್ವಜನಿಕರನ್ನು ಕೈ ಮುಗಿದು ಮತ ಚಲಾಯಿಸುವಂತೆ ವಿನಂತಿಸಿದರು. ಹಲವಾರು ವಾಹನಗಳು ಪ್ರಚಾರ ವಾಹನಕ್ಕೆ ಸಾಥ್ ನೀಡಿದವು. ಹಲವು ಆಟೋ ರಿಕ್ಷಾಗಳು, ಕಾರ್, ಬೈಕ್, ಪಿಕ್ಅಪ್ ಎಲ್ಲಾ ವಾಹನಗಳು ಸೇರಿ ರೋಡ್ ಶೋ ಅತ್ಯಂತ ವಿಜೃಂಭಣೆಯಿಂದ ಇಂದು ಬೆಳಿಗ್ಗೆ ಸಂಪಾಜೆಯಿಂದ ಆರಂಭಗೊಂಡು ಕಲ್ಲುಗುಂಡಿ, ಅರಂತೋಡು, ಸುಳ್ಯ, ಪೈಚಾರು, ಸೋಣಂಗೇರಿ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಅಲಂಕಾರು, ಕಡಬ, ಪಂಜ, ನಿಂತಿಕಲ್ಲು, ಕಾಣಿಯೂರು, ಬೆಳಂದೂರು, ಸವಣೂರು, ಪೆರುವಾಜೆ, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ ಸೇರಿದಂತೆ ಕ್ಷೇತ್ರದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿತು. ಸುಳ್ಯ ವಿಧಾನಸಭಾ ಸಮಿತಿ, ಜಿಲ್ಲೆ ಹಾಗು ರಾಜ್ಯ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
Advertisement
Advertisement