ಇಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ನನಗೆ ಮತ ಚಲಾಯಿಸಿದ ಎಲ್ಲಾ ಮತದಾರ ಬಂದುಗಳಿಗೆ , ನನ್ನ ಪರವಾಗಿ ಹಗಲಿರುಳು ದಣಿವರಿಯದೆ ಚುನಾವಣಾ ಪ್ರಚಾರ ಕೈಗೊಂಡ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ, ನಮ್ಮೊಂದಿಗೆ ಸಹಕರಿಸಿದ ಚುನಾವಣಾಧಿಕಾರಿಗಳು, ಸಿಬ್ಬಂದಿಗಳಿಗೆ, ನಮ್ಮ ಸಂದೇಶಗಳನ್ನು ಮತದಾರರಿಗೆ ತಲುಪಿಸಿದ ಪತ್ರಕರ್ತ ಮಿತ್ರರಿಗೆ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ಪಕ್ಷದ ಹಿತೈಷಿಗಳಿಗೆ, ನನ್ನ ಮೇಲೆ ವಿಶ್ವಾಸವಿಟ್ಟು ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ರಾಜ್ಯ ನಾಯಕರಿಗೆ, ಶಾಂತಿಯುತ ಹಾಗು ಮುಕ್ತ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಸರ್ವ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಕ್ಷೇತ್ರದ ಸಾಮಾನ್ಯ ಜನರ ಧ್ವನಿಯಾಗಿ ನಿರಂತರವಾಗಿ ನಿಮ್ಮ ಜೊತೆ ಇರುತ್ತೇನೆ ಎಂಬ ಭರವಸೆಯನ್ನು ಮತ್ತೊಮ್ಮೆ ನೀಡುತ್ತೇನೆ. ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಮತಿ ಸುಮನ ಬೆಳ್ಳಾರ್ಕರ್ ತಿಳಿಸಿದ್ದಾರೆ.
