ತ್ರಿಶೂರ್: ಸಿನಿಮಾ ತಾರೆ ಹಾಗೂ ಮಿಮಿಕ್ರಿ ಕಲಾವಿದ ‘ಕೊಲ್ಲಂ ಸುಧಿ’ ವಾಹನ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂದು (ಸೋಮವಾರ) ಬೆಳ್ಳಂಬೆಳಗ್ಗೆ 4.30am ಗಂಟೆಯ ಸುಮಾರಿಗೆ ತ್ರಿಶೂರ್ ಜಿಲ್ಲೆಯ ಕೈಪಮಂಗಲಂ, ಪನಂಬಿಲ್ಕುನ್ನ್ ಎಂಬಲ್ಲಿ ಕಾರು ಹಾಗೂ ಟಾಟಾ407 ನಡುವೆ ನಡೆದ ಅಪಘಾತದಲ್ಲಿ ಸಾವನಪ್ಪದ್ದಾರೆ. ನಿನ್ನೆ ರಾತ್ರಿ ವಡಗರ ಎಂಬಲ್ಲಿ, ಫ್ಲವರ್ಸ್ ವಾಹಿನಿಯ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೊಲ್ಲಂ ಸುಧಿಯನ್ನು ಕೊಡುಂಗಲ್ಲೂರು ಎ.ಆರ್ ಆಸ್ಪತ್ರೆಗೆ ಸೇರಿಸಿದರೂ ಜೀವರಕ್ಷಣೆ ಮಾಡಲಾಗಲಿಲ್ಲ. ಈ ಕಾರನಲ್ಲಿ ಬಿಕೆಕೆ ನಟನ್ ಬಿನು ಅಡಾಮಾಲಿ, ಉಲ್ಲಾಸ್ ಅರೂರ್, ಮಹೇಶ್ ಮುಂತಾದವರು ಇವರೊಂದಿಗೆ ಇದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2015 ರಲ್ಲಿ ಬಿಡುಗಡೆಯಾದ ಕಾಂತಾರಿ ಎಂಬ ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ ಇವರು, ಇನ್ನಿತರ ಹಲವು, ಚಿತ್ರಗಳಲ್ಲಿ ನಟಿಸಿದ್ದಾರೆ.
