ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೂ 17 ಶುಕ್ರವಾರದಂದು ದ.ಕ ಮತ್ತು ಉಡುಪಿ ಜಿಲ್ಲೆ ಮೊಬೈಲ್ ರಿಟೈಲರ್ಸ್ ಅಸೋಷಿಯೇಷನ್ ಹಾಗೂ ಮೊಬೈಲ್ ರಿಟೈಲರ್ಸ್ ಅಸೋಷಿಯೇಷನ್ ಸುಳ್ಯ ಇವರ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಡಾ. ನೀಲಾಂಬಿಕೈ ನಟರಾಜನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ದ.ಕ ಮತ್ತು ಉಡುಪಿ ಮೊಬೈಲ್ ರಿಟೈಲರಸ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಶೈಲೇಂದ್ರ ಸರಳಾಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಡಾ ಸತ್ಯವತಿ ಆಳ್ವ , ಡಾ ಮಹಂತ ದೇವರು, ಸುಳ್ಯ ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಶಬೀರ್ ಅಹ್ಮದ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೇಲ್ವಿಚಾರಕ ಚಂದ್ರಪ್ರಕಾಶ್ ಚೌಟಜೆ, ಮಹೇಶ್ ಮೇರ್ಕಜೆ, ಪ್ರದೀಪ್ ಬೊಳ್ಳೂರು, ಶ್ರೀಮತಿ ಪ್ರೇಮಾಜಾ, ಶ್ರೀಮತಿ ಆರ್ಪೀತಾ, ಹಾಗೂ ಸುಳ್ಯ ತಾಲೂಕಿನ ಮೊಬೈಲ್ ಅಂಗಡಿಯ ಮಾಲಕರು ಮತ್ತು ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಟೇಲ್ ಮೊಬೈಲ್ ಮಾಲಕರಾದ ಅಬ್ದುಲ್ ರಹಿಮಾನ್ ಸ್ವಾಗತಿಸಿ ವಂದಿಸಿದರು.