Advertisement
ಮೇನಾಲ:ವಿವಾದಿತ ಜಾಗದಲ್ಲಿ ಮೇನಾಲ ಉರೂಸ್ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜೂ.೧೭ರಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಅಜ್ಜಾವರ ಗ್ರಾಮದ ಮೇನಾಲ ಉರೂಸ್ ಕಾರ್ಯಕ್ರಮವನ್ನು ಮೇನಾಲ ಮಸೀದಿಯ ಪಕ್ಕದ ಜಾಗದಲ್ಲಿ ಮಾಡಬಹುದು. ಮೇನಾಲ ಕುಟುಂಬಸ್ಥರಿಗೆ ಸೇರಿದ ಮಸೀದಿಯ ಎದುರಿನ ಜಾಗ ವಿವಾದ ಇರುವುದರಿಂದ ವಿವಾದ ಇತ್ಯರ್ಥ ಆಗುವ ತನಕ ಅಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಹಿಂದೆ ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿ ವಿವಾದಿತ ಜಾಗದಲ್ಲೇ ಉರೂಸ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಜಿಲ್ಲಾಡಳಿತದ ಈ ಕ್ರಮವನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ. ಹೈಕೋರ್ಟು ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ತಿಳಿಸಿದರು.
Advertisement