ಕಡಬ ತಾಲೂಕಿನ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬುಧವಾರ ಕಡಬ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ತಹಶೀಲ್ದಾರ್ ಪರವಾಗಿ ಮಾತನಾಡಲು ಬಂದ ಆಗಮಿಸಿದ ಕಾಂಗ್ರೇಸ್ ಮುಖಂಡನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಚಪ್ಪಲಿ ತೆಗೆದ ಘಟನೆ ನಡೆದಿದೆ.ಸರಕಾರಿ ಜಾಗದಲ್ಲಿದ್ದ ವೃದ್ಧ ದಂಪತಿಗಳ ಮನೆ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ನೀತಿ ಟ್ರಸ್ಟ್ ಮತ್ತು ಸಂತ್ರಸ್ತ ಕುಟುಂಬ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದೆ. ವೃದ್ದ ದಂಪತಿ ನಜ್ಜುಗುಜ್ಜುಗೊಂಡ ಪಾತ್ರೆ ಪರಿಕರಗಳ ಜೊತೆ ಆಗಮಿಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಮನೆ ಕಳೆದುಕೊಂಡ ವೃದ್ದ ದಂಪತಿ ನನಗೆ ಜೀವ ಬೇಡ ಎಂದು ನೆಲದಲ್ಲಿ ಒದ್ದಾಡಿದ್ದು, ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂತು.ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಅಧಿಕಾರಿ ಹೇಳಿದ ಹಿನ್ನೆಲೆ ಪ್ರತಿಭಟನಾಕಾರರು ಆಕೋಶಗೊಂಡು ರಸ್ತೆ ಸಮೀಪ ಗುಂಪು ಸೇರಿದ್ದಾರೆ. ಪ್ರತಿಭಟನಾಕಾರರು ಸ್ಥಳಕ್ಕೆ ಎಸಿ,ಡಿಸಿ ಬರುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಪರವಾಗಿ ಮಾತನಾಡಲು ಬಂದ ಆಗಮಿಸಿದ ಕಾಂಗ್ರೇಸ್ ಮುಖಂಡರೊಬ್ಬರಿಗೆ ಪ್ರತಿಭಟನಾ ನಿರತ ಮಹಿಳೆಯ ಆಕ್ರೋಶ ವ್ಯಕ್ತಪಡಿಸಿದ್ದು, ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದ ಚಪ್ಪಲಿ ತೆಗೆದಿದ್ದಾರೆ. ಕಾಂಗ್ರೇಸ್ ಮುಖಂಡ ರಾಯ್ ಅಬ್ರಹಾಂ ಅವರು ಪ್ರತಿಭಟನಾ ನಿರತರೊಂದಿಗೆ ಮಾತಿಗೆ ಮುಂದಾಗಿದ್ದಾರೆ. ಈ ವೇಳೆ ಸಿಪಿಐಂ ಮುಖಂಡೆ ಈಶ್ವರಿ ಎಂಬಾಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಈಶ್ವರಿ ಅವರು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ತಪ್ಪಲಿ ತೆಗೆದಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.