ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀಠ ಬಯಲುವಿನಲ್ಲಿ ಸೋಮವಾರ ರಾತ್ರಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಕೂಡ ಬಲಿಯಾಗಿದ್ದ ಇದೀಗ ನಕ್ಸಲ್ ವಿಕ್ರಂಗೌಡನ ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ. ಹೌದು ಮರಣೋತ್ತರ ಪರೀಕ್ಷೆ ಬಳಿಕ ವಿಕ್ರಂ ಗೌಡನ ಶಬವನ್ನು ಕುಟುಂಬಸ್ಥರಿಗೆ ಸಾಂತರಿಸಲಾಯಿತು ಗ್ರಾಮಕ್ಕೆ ವಿಕ್ರಂ ಗೌಡನ ಶವ ತೆಗೆದುಕೊಂಡು ಹೋಗುತ್ತಿದ್ದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಶವ ಸಾಗಣೆ ವೇಳೆ ಆಂಬುಲೆನ್ಸ್ ಪಲ್ಟಿಯಾಗಿದೆ.
ವೇಗವಾಗಿ ಹೋಗುತ್ತಿದ್ದ ಆಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಹೋಗಿದೆ. ರಸ್ತೆ ಬದಿಯಲ್ಲಿದ್ದ ಗುಡಿಯೊಳೊಗೆ ವಾಲಿಕೊಂಡು ನಿಂತಿದೆ. ಕೂಡಲೆ ಸ್ಥಳದಲ್ಲಿದ್ದ ಜನರು ಧಾವಿಸಿ, ಆಯಂಬುಲೆನ್ಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ, ಆಯಂಬುಲೆನ್ಸ್ ವಿಕ್ರಂಗೌಡ ಮೃತದೇಹ ಹೊತ್ತು ಸಾಗಿದೆ.
ಮೋಸ್ಟ ವಾಂಟೆಡ್ ವಿಕ್ರಂ ಗೌಡ ಅಂಡ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕುಟುಂಬಸ್ಥರಿಗೆ ವಿಕ್ರಂ ಗೌಡನ ಮೃತ ದೇಹವನ್ನು ತೆಗೆದುಕೊಂಡು ಹೆಬ್ರಿಕೋಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಕ್ರಂ ಗೌಡನ ಅಂತ್ಯಸಂಸ್ಕಾರ ನೆರವಿರುವ ಸಾಧ್ಯತೆ ಇದೆ. ವಿಕ್ರಂ ಗೌಡನ ನಿವಾಸದ ಆವರಣದಲ್ಲಿಯೇ ಆತನ ಅಂತ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.