ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಸುಳ್ಯದಲ್ಲಿ ಕೆಲವು ಹೊತ್ತು ಆತಂಕ ಸೃಷ್ಟಿಸಲು ಪ್ರಯತ್ನ ನಡೆಸಿದ ಘಟನೆ‌ ಇದೀಗ ವರದಿಯಾಗಿದೆ.

ಗಾಂಧೀನಗರದ ವೈನ್ ಶಾಪ್ ಮುಂದೆ ಬೈಕ್‌ ನಲ್ಲಿ ಬಂದ ಇಬ್ಬರು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಅವರ ಕೈಯಲ್ಲಿ ಕತ್ತಿ ಇದ್ದು ಅದನ್ನು ಬ್ಯಾಗಿನಲ್ಲಿ ಇಡುವಂತಹ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.  ಇದನ್ನು ಗಮನಿಸಿದ ಕೆಲವರು ಅಲ್ಲಿ ಸೇರುತ್ತಿದ್ದಂತೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು‌ಬಂದಿದೆ. ಆಗಂತುಕರು ಸ್ಪೆಂಡರ್ ಬೈಕ್ ನಲ್ಲಿ ಬಂದಿದ್ದು, ಅದರಲ್ಲಿ ಕಪ್ಪು ಜ್ಯಾಕೆಟ್ ಧರಿಸಿದ್ದ ಒಬ್ಬ ಅವಾಚ್ಯ ಶಬ್ದದಿಂದ ಬೈಯ್ದಿದ್ದಾನೆ ಎನ್ನಲಾಗಿದೆ. ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Leave a Reply

Your email address will not be published. Required fields are marked *