ಮಂಜೇಶ್ವರ;ಮನೆಗೆ ನುಗ್ಗಿ ಕಳ್ಳರು ಲಕ್ಷಾಂತರ ಮೌಲ್ಯದ 60 ಪವನ್ ಚಿನ್ನಾಭರಣ ಮತ್ತು 50 ಸಾವಿರ ರೂ.ನಗದು ಕಳವು ಮಾಡಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ರಾಗಂ ಜಂಕ್ಷನ್ ನಿವಾಸಿ ಹಮೀದ್ ತಂಙಳ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.


ಹಮೀದ್ ತಂಙಳ್ ಕುಟುಂಬ ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಏರ್ವಾಡಿಗೆ ತೆರಳಿದ್ದರು.ಗುರುವಾರ ಸಂಜೆ ಮನೆಗೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ತಂಙಳ್ ಅವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಕಳ್ಳರು ಕಪಾಟನ್ನು ಬೀಗ ಒಡೆದು ಕಳವುಗೈದಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ