ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಡೌನ್ ಆಗಿದೆ. ಎಲ್ಲರಿಗೂ ಪೇಜ್ ಲೋಡ್ ಆಗದೆ ಎರರ್ ಬರ್ತಾ ಇದೆ. ‘Something went wrong. Try reloading’ ಹಾಗೂ ‘cannot retrieve tweets’ ಎಂದು ಬರುತ್ತಿದೆ.
ಅರೇ ಇದೇನಪ್ಪಾ ಟ್ವಿಟರ್ ವರ್ಕ್ ಆಗ್ತಾ ಇಲ್ಲ ಅಂತ ಬಹಳ ಸಮಯದಿಂದ ಪರದಾಡುತ್ತಿದ್ದೀರಾ? ಮೊಬೈಲ್ ರಿಸ್ಟಾರ್ಟ್, ಸ್ವಿಚ್ಡ್ ಆಫ್-ಆನ್ ಮಾಡಿ ನೋಡ್ತಾ ಇದ್ದೀರಾ? ಇದು ನಿಮ್ಮ ಮೊಬೈಲ್ ತೊಂದರೆಯಲ್ಲ. ನಿಮಗೆ ಮಾತ್ರವಾದ ತೊಂದರೆಯೂ ಅಲ್ಲ. ಜಗತ್ತಿನೆಲ್ಲೆಡೆ ಟ್ವಿಟರ್ ಸರ್ವರ್ ಡೌನ್ ಆಗಿದೆ.
ಹೌದು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಡೌನ್ ಆಗಿದೆ. ಎಲ್ಲರಿಗೂ ಪೇಜ್ ಲೋಡ್ ಆಗದೆ ಎರರ್ ಬರ್ತಾ ಇದೆ. ‘Something went wrong. Try reloading’ ಹಾಗೂ ‘cannot retrieve tweets’ ಎಂದು ಬರುತ್ತಿದೆ.
ಇತರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಸಮಸ್ಯೆಯ ಬಗ್ಗೆ ದೂರು ಹಂಚಿಕೊಳ್ಳುತ್ತಿದ್ದಾರೆ. ಡೌನ್ ಡಿಟೆಕ್ಟರ್, ಆನ್‌ಲೈನ್ ಸೇವೆಗಳಲ್ಲಿನ ಅಡೆತಡೆಗಳನ್ನು ಟ್ರ್ಯಾಕ್ ಮಾಡುವ ವೆಬ್ಸೈಟ್ವೊಂದು ಸುಮಾರು 4,000 ಬಳಕೆದಾರರು ಟ್ವಿಟರ್‌ನ ಕಾರ್ಯನಿರ್ವಹಣೆಯ ಸಮಸ್ಯೆಗಳನ್ನು ಪ್ರಕಟಿಸಿದ್ದಾರೆ ಎಂದು ಹೇಳಿದೆ. ಆದರೆ ಕಂಪನಿಯು (ಟ್ವಿಟರ್) ಇಲ್ಲಿಯವರೆಗೆ ಸ್ಥಗಿತದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಎಲಾನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈ ವರ್ಷ ಎದುರಿಸುತ್ತಿರುವ ಮೂರನೇ ಟ್ವಿಟರ್ ಡೌನ್ ಇದಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಟ್ವಿಟರ್‌ನ ಅನೇಕ ಜಾಗತಿಕ ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಆನಂತರ ಮಾರ್ಚ್ ತಿಂಗಳಲ್ಲಿ ಟ್ವಿಟರ್ ಸರ್ವರ್ ಡೌನ್ ಆಗಿತ್ತು.