ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ದಲ್ಲಿ ಯಶಸ್ಸು -ಗಣ್ಯರ ಅಭಿಮತ
ಪುತ್ತೂರು: ಅಡಿಕೆ ರಬ್ಬರ್ ತೆಂಗಿನಕಾಯಿ ಹಾಗು ಕಾಡುತ್ಪತ್ತಿ ಖರೀದಿ ಕೇಂದ್ರ ನ್ಯೂ ಜನತಾ ಟ್ರೇಡರ್ಸ್ ಜು.೩ರಂದು ಕುಂಬ್ರ ಗೋಕುಲ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಂಡಿತು. ಸಂಸ್ಥೆಯ ನ್ನು ಉದ್ಘಾಟಿಸಿದ ಒಳಮೋಗ್ರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ‌ ಮಾತನಾಡಿ ಪ್ರಾಮಾಣಿಕ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ .ಸಂಸ್ಥೆಯ ಮಾಲಕರು ಪ್ರಮಾಣಿಕ ವ್ಯಾಪಾರ ಮಾಡುವ ಮುಖಾಂತರ ಉದ್ಯಮ ದಲ್ಲಿ ಗುರುತಿಸಿಗೊಂಡಿದ್ದು ಅವರ ಉದ್ಯಮಯಶಸ್ಸು ಕಾಣುದರಲ್ಲಿ ಸಂಶಯವಿಲ್ಲ ಎಂದರು.ಅಧ್ಯಕ್ಷ ತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಷ್ ರೈ ಮಾತನಾಡಿ ಯಾವುದೇ ವ್ಯವಹಾರ ದಲ್ಲಿ ವೃತ್ತಿ ಧರ್ಮ ಇದ್ದಾಗ ಅಂತಹ ವ್ಯಾಪಾರ ಅಭಿವೃದ್ಧಿ ಕಾಣುತ್ತದೆ. ವ್ಯಾಪಾರ ದ ಲಾಭದ ಒಂದಂಶವನ್ನು ಸಮಾಜಕ್ಕೂ ನೀಡುವ ಗುಣ ತಮ್ಮಲ್ಲಿದ್ದಾಗ ಅಂತಹ ವ್ಯವಹಾರ ಶ್ರೇಷ್ಠ ತೆ ಇರುತ್ತವೆ. ಎಂದರು.ಇನ್ನೂರ್ವ ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ವೆಂಕಪ್ಪ ಗೌಡ ಮಾತನಾಡಿ ವ್ಯವಹಾರದಲ್ಲಿ ಪ್ರಮಾಣಿಕತೆ ಬದ್ದತೆ ಪ್ರೀತಿ ವಿಶ್ವಾಸ ಅಗತ್ಯ ಈ ನಿಟ್ಟಿನಲ್ಲಿ ಹನೀಪ್ ರವರ ಉದ್ಯಮ ಯಶಸ್ಸು ಕಾಣಲಿದೆ.ಎಂದರು.ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಮಾತನಾಡಿ ಉತ್ತಮ ಪ್ರಮಾಣಿಕ ವ್ಯವಹಾರ ಕ್ಕೆ ಹೆಸರುವಾಸಿಯಾಗಿರುವ ನ್ಯೂ ಜನತಾ ಟೇಡರ್ಸ್ ಯಶಸ್ಸು ಕಾಣುದರಲ್ಲಿ ಸಂಶಯವಿಲ್ಲ. ಎಂದು ಹೇಳಿ ಶುಭ ಹಾರೈಸಿದರು.ಕಾರ್ಯಕ್ರಮ ದಲ್ಲಿ ಪೈಚಾರಿನ ಹಿರಿಯ ಉದ್ಯಮಿ ಇಬ್ರಾಹಿಂ ಪಿ.ಕೆ.ಉದ್ಯಮಿ ಹಸನ್ ಹಾಜಿ ದರ್ಖಾಸ್ ,ಬಾಲಕೃಷ್ಣ ರೈ ಕುಂಬ್ರ,ಸುಲೈಮಾನ್ ಚೆನ್ನಾರ್ ,ಕೋಚಣ್ಣ ರೈ ,ಮುಸ್ತಫಾ ಸುಳ್ಯ, ಅಬ್ಬಾಸ್ ಶೇಖಮಲೆ,ಕುಂಬ್ರ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್ ಸುಂದರ್ ಕೊಪ್ಪಳ ರೈ,ಅಧ್ಯಕ್ಷ ರಫೀಕ್ ಅಲ್ ರಾಯಾ,ಪ್ರಧಾನ ಕಾರ್ಯದರ್ಶಿ ಭವ್ಯ ಬಬ್ಲಿ,ಮೆಲ್ವಿನ್ ಮೊಂತೆರೂ,ನಾರಾಯಣ ಪೂಜಾರಿ ಕುರಿಕ್ಕಾನ,ಪದ್ಮನಾಭ ಅಚಾರ್ಯ,ಪಾಲುದಾರರಾದ ಹನೀಫ್,ಸಲಾಂ ಪೈಚಾರ್,ಫಲಲುದ್ದೀನ್,ಇದ್ದರುಝುಹೈರ್ ಮತ್ತು ಝಮೀರ್ ಸಹಕರಿಸಿದರು.ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಅರಂತೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ