ಮುಂಬೈ: ರಿಲಯನ್ಸ್ ಜಿಯೋ 4G ಫೋನ್ (Jio 4G phone) ‘Jio Bharat V2’ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಮೊಬೈಲ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ (Jio Bharat Price) ಲಭ್ಯವಾಗುತ್ತಿದೆ. 4 ಜಿ ಮತ್ತು 5ಜಿ ನೆಟ್​ವರ್ಕ್​ಗಳಲ್ಲಿ ಕಾರ್ಯ ನಿರ್ವಹಿಸುವ ಈ ಮೊಬೈಲ್ ಕೇವಲ 999 ರೂಪಾಯಿಗೆ (999 rupees Mobile) ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ರಿಲಯನ್ಸ್ ಜಿಯೋ 4G ಮತ್ತು 5G ನೆಟ್‌ವರ್ಕ್‌ಗಳಲ್ಲಿ ಮಾತ್ರ ನಿರ್ವಹಿಸುತ್ತದೆ. ‘ಜಿಯೋ ಭಾರತ್ ವಿ2’ ಮೊಬೈಲ್ ಮೂಲಕ ಕಂಪನಿಯು ದೇಶಾದ್ಯಂತ ಸುಮಾರು 10 ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ ಎಂದು ರಿಲಯನ್ಸ್ ಜಿಯೋ ತಿಳಿಸಿದೆ. Jio Bharat V2 ಅತ್ಯಂತ ಅಗ್ಗದ ಇಂಟರ್​ನೆಟ್​ ಸೌಲಭ್ಯ ಇರುವ ಫೋನ್ ಆಗಿದೆ. ಫೋನ್​ನ ಬೆಲೆಯಂತೆ ಅದರ ಟ್ಯಾರಿಫ್​ ಪ್ಲಾನ್​ ಕೂಡ ಇತರೆ ನೆಟ್​ವರ್ಕ್​ಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಜಿಯೋ ಭಾರತ್ V2 ನ ತಿಂಗಳ ಪ್ಲಾನ್​ಗಾಗಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಗೆ 123 ರೂಪಾಯಿಯನ್ನ ಪಾವತಿಸಬೇಕು. ಇತರ ಆಪರೇಟರ್‌ಗಳ ಧ್ವನಿ ಕರೆಗಳು ಮತ್ತು 2 GB ಮಾಸಿಕ ಯೋಜನೆಗಳು 179 ರೂಪಾಯಿಯಿಂದ ಪ್ರಾರಂಭವಾಗುತ್ತಿವೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ