ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಇದು ಪ್ರಮುಖ ಎಚ್ಚರಿಕೆ ಎಂದರೆ ತಪ್ಪಾಗಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಬಗ್ ಶಾಕ್ ನೀಡಿವೆ. ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಇಂದಿನಿಂದಲೇ ಬೆಲೆ ಏರಿಕೆ ಜಾರಿಗೆ ಬಂದಿದೆ. ಅಂದರೆ ಜುಲೈ 4 ರಿಂದ ಹೊಸ ದರಗಳು ಅನ್ವಯವಾಗಲಿದೆ. ಸಾಮಾನ್ಯವಾಗಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಆದರೆ ಈ ಬಾರಿ ಜುಲೈ 4 ರಂದು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಎಎನ್‌ಐ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ರೂ. 7ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2190.5 ರೂಪಾಯಿದೆ. 19 ಕೆಜಿ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಅನಿಲ ಸಿಲಿಂಡರ್ ಎಂದು ಕರೆಯಲಾಗುತ್ತದೆ. ಆದಾಗ್ಯೂ, ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆ ಸ್ಥಿರವಾಗಿದೆ. 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಬಹುದು. ತೈಲ ಮಾರುಕಟ್ಟೆ ಕಂಪನಿಗಳು ಎರಡು ತಿಂಗಳಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಪರಿಹಾರ ನೀಡುತ್ತಿವೆ. ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಜೂನ್ 1 ರಂದು ಸಿಲಿಂಡರ್ ಬೆಲೆ ರೂ. 83ಕ್ಕೆ ಇಳಿದಿದೆ. ಹಾಗೆಯೇ ಮೇ 1 ರಂದು ಸಿಲಿಂಡರ್ ಬೆಲೆ ರೂ. 172ರಷ್ಟು ಇಳಿಕೆಯಾಗಿದೆ. ಆದರೆ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ತುಸು ಏರಿಕೆಯಾಗಿದೆ. ಹಾಗಾಗಿ ಈಗ ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ ರೂ. 1875 ರಿಂದ ರೂ. 1882 ರೂಪಾಯಿಗೆ ಏರಿಕೆಯಾಗಿದೆ . ಮುಂಬೈನಲ್ಲಿ ಈ ಗ್ಯಾಸ್ ಸಿಲಿಂಡರ್ ಬೆಲೆ ರೂ. 1725 ರಿಂದ ರೂ. 1732ಕ್ಕೆ ಏರಿದೆ. ಚೆನ್ನೈನಲ್ಲಿ ರೂ. 1937 ರಿಂದ ರೂ. 1944ಕ್ಕೆ ಏರಿಕೆಯಾಗಿದೆ.
Advertisement
Advertisement