ಬಾಲಿವುಡ್ ಬಾದ್’ಷಾ ನಟ ಶಾರುಖ್ ಖಾನ್ (Sharukh Khan) ಸಾಲು ಸಾಲು ಸಿನಿಮಾಗಳಲ್ಲಿ ‘ಪಠಾಣ್’ ಹೀರೋ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರೀಕರಣವೊಂದರ ವೇಳೆ ಶಾರುಖ್ ಖಾನ್‌ಗೆ ಏಟಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಪಠಾಣ್’ ಸಿನಿಮಾದ ಸಕ್ಸಸ್ ನಂತರ ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ಸಿನಿಮಾದ ರಿಲೀಸ್‌ಗೆ ಎದುರು ನೋಡ್ತಿರೋ ಅಭಿಮಾನಿಗಳಿಗೆ ಇದೀಗ ಶಾರುಖ್ ಬಗ್ಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಶೂಟಿಂಗ್ ಸಂದರ್ಭದಲ್ಲಿ ಶಾರುಖ್ ಖಾನ್ ಮೂಗಿಗೆ (Injury) ಏಟಾಗಿದೆ. ಶಾರುಖ್ ಖಾನ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ವೊಂದಕ್ಕಾಗಿ ನಟ ಭಾಗಿಯಾಗಿದ್ದರು. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ಶಾರುಖ್ ಚಿತ್ರೀಕರಣದಲ್ಲಿದ್ದಾಗ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ. ಕೂಡಲೇ ನಟನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತಚಿಕಿತ್ಸೆಯನ್ನು ಮಾಡಿದ್ದಾರೆ. ಯಾವುದೇ ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಬಳಿಕ ಬ್ಯಾಂಡೇಜ್‌ವೊಂದನ್ನ ಮೂಗಿಗೆ ಸುತ್ತಿ ಕಳುಹಿಸಿದ್ದಾರೆ. ಎಂದು ತಿಳಿದುಬಂದಿದೆ.
Advertisement
Advertisement