ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ನಿವಾಸಿ ಅಬ್ದುಲ್ಲ ಎಂಬವರು 2023 ಜನವರಿ 29 ರಂದು ತೋಟದಲ್ಲಿ ಕೃಷಿ ಚಟುವಟಿಕೆ ಯಲ್ಲಿ ನಿರತರಾಗಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮರಣ ಹೊಂದಿದ್ದರು, ಮೃತರ ಕುಟುಂಬಕ್ಕೆ “ಕರ್ನಾಟಕ ಸರಕಾರದ ರಾಜ್ಯ ಕೃಷಿ ಇಲಾಖೆ ವತಿಯಿಂದ “ಕೃಷಿಕರ ಆಕಸ್ಮಿಕ ಮರಣ ಪರಿಹಾರ ಯೋಜನೆ “ಯಡಿ ರೂ 2 ಲಕ್ಷ ಪರಿಹಾರ ಮೊತ್ತ ಬಿಡುಗಡೆ ಗೊoಡಿರುತ್ತದೆ.


ಈ ಸಂದರ್ಭದಲ್ಲಿ ಪುತ್ತೂರು ಉಪ ವಿಭಾಗದ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಶಿವಾಸನ್ ಮಾತನಾಡಿ ಕೃಷಿಕ ಅಥವಾ ಕೃಷಿ ಕೂಲಿ ಕಾರ್ಮಿಕ ಯಾವುದೇ ರೀತಿಯಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ಸರಳ ದಾಖಲೆ ಗಳ ಮೂಲಕ ಪರಿಹಾರ ನೀಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಜಂಇಯ್ಯತುಲ್ ಫಾಲಾಹ್ ಕಾರ್ಯದರ್ಶಿ ಮೂಸ ಪೈoಬಚಾಲ್, ನಗರಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಕಚೇರಿ ಅಧೀಕ್ಷಕಿ ಗೀತಾಕುಮಾರಿ, ಕಚೇರಿ ಸಹಾಯಕ ತೀರ್ಥಕುಮಾರ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ. ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಪರಿಹಾರ ದೊರಕಿಸಿಕೊಡಿಸುವಲ್ಲಿ
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಮುತುವರ್ಜಿ ವಹಿಸಲಾಗಿತ್ತು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ