Advertisement

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಸಮಾಜಕಾರ್ಯ ವಿಭಾಗ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ, ಹಾಗೂ ಇಕೋ ಕ್ಲಬ್ ಸುಳ್ಯ ಹಾಗೂ ದೀಪಾಂಜಲಿ ಮಹಿಳಾ ಮಂಡಲ (ರಿ) ಶಾಂತಿನಗರ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ “ಸಸ್ಯೋತ್ಸವ” ಪರಿಸರ ಜಾಗೃತಿ ಮತ್ತು ಗಿಡನೆಡುವ ಕಾರ್ಯಕ್ರಮ ದಿನಾಂಕ ಜೂನ್ 18, 2022 ನೇ ಶನಿವಾರದಂದು ನಡೆಯಿತು. ಎನ್ನೆಂಸಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು, ಇಲ್ಲಿನ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ಕಲ್ಪಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಝೀರ್ ಶಾಂತಿನಗರ (ಎಸ್.ಡಿ.ಎಂ.ಸಿ ಅಧ್ಯಕ್ಷರು ಶಾಂತಿನಗರ) ವಹಿಸಿದರು. ಎನ್ನೆಂಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಮ್.ಎಮ್ ಉದ್ಘಾಟಿಸಿದರು. ಸುಳ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸೌಮ್ಯ ಪಿ.ಎನ್ ಉಪವಲಯ ಅರಣ್ಯಾಧಿಕಾರಿ ಅರಂತೋಡು ಸುಳ್ಯ ವಲಯ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಮಾವತಿ ಎಸ್, ಅಧ್ಯಕ್ಷರು ದೀಪಾಂಜಲಿ ಮಹಿಳಾ ಮಂಡಲಗಳ (ರಿ) ಶಾಂತಿನಗರ, ಶ್ರೀಮತಿ ತುಳಸಿ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ ಶಾಲೆ ಶಾಂತಿನಗರ, ಶ್ರೀ ಸಂಜೀವ ಕುದ್ಪಾಜೆ (ಉಪನ್ಯಾಸಕರು ಎನ್ನೆಂಸಿ) ಶ್ರೀಮತಿ ಶೋಭಾ.ಎ (ಉಪನ್ಯಾಸಕರು, ಎನ್ನೆಂಸಿ ಸಮಾಜಕಾರ್ಯ ವಿಭಾಗ), ಶ್ರೀಮತಿ ಇಂದಿರಾ ಅಂಗನವಾಡಿ ಕಾರ್ಯಕರ್ತೆ ಶಾಂತಿನಗರ, ಶ್ರೀಮತಿ ಕೃಪಾ ಎ.ಎನ್ (ಸಮಾಜಕಾರ್ಯ ವಿಭಾಗ) ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ನಿಶಾಂತ್ ಎ.ಡಿ ಸ್ವಾಗತಿಸಿ, ಸೋನಾಲಿ ಎಸ್.ಎನ್, ಅಭಿನಂದಿಸಿ, ಕೃತಿ ಕೆ.ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಮಧುರಾ ಎಂ.ಆರ್ (ಮುಖ್ಯಸ್ಥರು ಸಮಾಜ ಕಾರ್ಯ ವಿಭಾಗ) ಕಾರ್ಯಕ್ರವನ್ನು ಸಂಘಟಿಸಿದರು, ವಿಭಾಗದ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಭೋದಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ