Advertisement

ತುಮಕೂರು: ಉಗಾಂಡದ (Uganda) ನಾಲ್ವರು ಮಹಿಳೆಯರು ಪೊಲೀಸ್ ಹಾಗೂ ಪಾಸ್ ಪೋರ್ಟ್ ಅವಧಿ ಮುಗಿದ ವಿದೇಶಿಗರ ನಿರಾಶ್ರಿತ ಕೇಂದ್ರದ (Foreigners Refugee Centre) ಸಿಬ್ಬಂದಿ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ದಿಬ್ಬೂರಿನಲ್ಲಿ ನಡೆದಿದೆ. ಪಿಎಸ್ಐ ಚಂದ್ರಕಲಾ, ಡಬ್ಲ್ಯುಪಿಸಿ ತಾಸೀನಾ ಬಾನು, ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವರ ಮೇಲೆ ದಾಳಿ ನಡೆಸಲಾಗಿದೆ. ಪಾಸ್​ಪೋರ್ಟ್ ಅವಧಿ ಮುಕ್ತಾಯದ ನಂತರವೂ ಅಕ್ರಮವಾಗಿ ಇಲ್ಲೇ ಉಳಿದುಕೊಂಡಿದ್ದ ವಿದೇಶಿ ಪ್ರಜೆಗಳನ್ನು ದಿಬ್ಬೂರಿನಲ್ಲಿರುವ ವಿದೇಶಿಗರ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ಕೇಂದ್ರದಲ್ಲಿ ಸುಮಾರು 30 ಜನರಿದ್ದಾರೆ. ಅದರಂತೆ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ಉಗಾಂಡದ ನಾಲ್ವರು ಮಹಿಳೆಯರು ಸಿಬ್ಬಂದಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಚಾಕು ಹಿಡಿದುಕೊಂಡು ಕೊಲೆ ಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ಚಂದ್ರಕಲಾ, ಡಬ್ಲ್ಯುಪಿಸಿ ತಾಸೀನಾ ಬಾನು, ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬವರ ಕೈ ಕಾಲುಗಳಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ