ಉತ್ತರ ಪ್ರದೇಶ: ಆಘಾತಕಾರಿ, ನಾಚಿಕೆಗೇಟಿನ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮಲಗಿದ್ದ ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಇದರ ವಿಡಿಯೋ ವನ್ನು ಸೆರೆಹಿಡಿಯಲಾಗಿದೆ. ತದನಂತರ ಪೋಲಿಸರಿಗೆ ವಿಷಯ ತಿಳಿಸಿದ್ದು ಆರೋಪಿಯನ್ನು ಪೋಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಯನ್ನು 57 ವರ್ಷದ ಬ್ರಿಜೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾದ್ದು, ದುಷ್ಕರ್ಮಿಗೆ ಇದು ಮೊದಲ ಬಾರಿ ಅಲ್ಲ. ಈ ಹಿಂದೆ ಎರಡರಿಂದ ಮೂರು ಮೂಕ ಪ್ರಾಣಿಗಳೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಆತನನ್ನು ನಿತ್ಯ ಅಪರಾಧಿ ಎಂದು ಗುರುತಿಸಲಾಗಿದೆ.
https://twitter.com/Satyamooknayak/status/1677291883910025216?
ಕಾನ್ಪುರದ ಜಂಟಿ ಆಯುಕ್ತರ ಪ್ರಕಾರ, “57 ವರ್ಷದ ಬ್ರಿಜೇಶ್ ಕುಮಾರ್ ಮಿಶ್ರಾ ಅವರನ್ನು ಐಪಿಸಿ ಸೆಕ್ಷನ್ 377 (ಪ್ರಾಣಿಗಳೊಂದಿಗೆ ಅಸ್ವಾಭಾವಿಕ ಲೈಂಗಿಕತೆ) ಅಡಿಯಲ್ಲಿ ಬಂಧಿಸಲಾಗಿದೆ. ನಮ್ಮ ತನಿಖೆಯ ಸಮಯದಲ್ಲಿ, ಮಿಶ್ರಾ ಆ ಪ್ರದೇಶದಲ್ಲಿ 3 ವಿಭಿನ್ನ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ತೋರಿಸುವ ಬಹು ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪಡೆದುಕೊಂಡಿದ್ದೇವೆ. ವಿಚಾರಣೆ ವೇಳೆ ಆತ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಅಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಆತನನ್ನು ಒಳಪಡಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ದೃಶ್ಯಾವಳಿಯಲ್ಲಿ, ಮಿಶ್ರಾ ಹೊಲದಲ್ಲಿ ಕುಳಿತಿದ್ದ ಹಸುವಿನ ಮೇಲೆ ಅತ್ಯಾಚಾರವೆಸಗುತ್ತಿರುವುದು ಕಂಡುಬಂದಿದೆ. ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ನಂತರ, ನೆರೆಹೊರೆಯವರ ದೂರಿನ ಮೇರೆಗೆ ಗುರುವಾರ ತಡರಾತ್ರಿ ಪ್ರಕರಣ ದಾಖಲಿಸಿದ ಪೊಲೀಸರು ಮಿಶ್ರಾನನ್ನು ಶುಕ್ರವಾರ ಬಂಧಿಸಿದ್ದಾರೆ.