ಉಡುಪಿ: ದೇಶದಲ್ಲಿ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದೆ. ಎಲ್ಲ ಕಡೆಯು ಜಲಾವೃತಗೊಂಡಿರುವ ದೃಶ್ಯಗಳೇ ಕಾಣುತ್ತಿದೆ, ಇನ್ನೂ ಕರ್ನಾಟಕದ ಭಾಗದಲ್ಲಿ ವರುಣ ಆರ್ಭಟ ಜೋರಾಗಿದೆ, ಅನೇಕ ಸಾವು – ನೋವುಗಳು ಕೂಡ ಸಂಭವಿಸಿದೆ. ಉಡುಪಿಯಲ್ಲಿ ಹೆಚ್ಚು ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದು 6 ಜನ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಉಡುಪಿಗೆ ಆಪದ್ಬಾಂಧವನಾಗಿ ಬಂದವರು ಕಯಾಕಿಂಗ್ ಸಾಹಸಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು, ಹೌದು, ಕಯಾಕಿಂಗ್ ಸಾಹಸಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ಕಳೆದ ಕೆಲವು ವರ್ಷಗಳಿಂದ 250ಕ್ಕೂ ಹೆಚ್ಚು ಪ್ರವಾಹ ಪೀಡಿತ ಜನರನ್ನು ರಕ್ಷಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾಗಿ ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು (44) ಅವರು ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯ ಗ್ರಾಮಗಳಲ್ಲಿ ಭಾರಿ ಮಳೆಯಿಂದ ನಿಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 70 ಜನರನ್ನು ರಕ್ಷಿಸಿದ್ದಾರೆ.

ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ತಮ್ಮ ಈ ಸೇವೆಯಲ್ಲಿ ರೋಗಿಗಳು, ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಟೈಮ್​​ ಆಫ್ ಇಂಡಿಯಾ ವರದಿ ಮಾಡಿದೆ. ಜುಲೈ 6ರಂದು ಬೆಳಗ್ಗೆ 7 ಗಂಟೆಗೆ ಕೊಡಂಕೂರಿನ ವಾರ್ಡ್ ಸದಸ್ಯರಿಂದ ನನ್ನ ಸಹಾಯ ಕೋರಿ ದೂರವಾಣಿ ಕರೆ ಬಂದಿದ್ದು, ಈ ಸಮಯದಲ್ಲಿ ನಾನು ತಕ್ಷಣ ಪ್ರತಿಕ್ರಿಯೆ ನೀಡಿ, ನಿಟ್ಟೂರಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ, ಅಲ್ಲಿ ಮನೆಯೊಂದು ನೀರಿನಿಂದ ಮುಳುಗಿದ್ದು, ಅವರನ್ನು ಕಾಪಾಡಲು ಅಗ್ನಿಶಾಮಕ ಮತ್ತು ತುರ್ತು ಚಿಕಿತ್ಸಾ ವಿಭಾಗದ ರಕ್ಷಣಾ ಬೋಟ್ ಕೂಡ ಬಂದಿತ್ತು, ಆದರೆ ಅಗ್ನಿಶಾಮಕ ಬೋಟ್​​ನ್ನು ಅಲ್ಲಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ಈಗ ಅವರನ್ನು ಕಾಪಾಡಲೇಬೇಕು ಎಂದು ಧೈರ್ಯದಿಂದ ನನ್ನ ಕಾಯಕಿಂಗ್​​ನ್ನು ಬಳಸಿಕೊಂಡು, ಆ ಮನೆಯನ್ನು ತಲುಪಿದೆ, ಅಲ್ಲಿದ್ದ ಇಬ್ಬರು ವೃದ್ಧರನ್ನು ರಕ್ಷಿಸಿದೆ, ಕೊಡಂಕೂರು, ತರಕಟ್ಟೆ, ಕೆಮ್ಮಣ್ಣು , ಕೊಡವೂರು, ಕೆಮ್ಮಣ್ಣು ಮತ್ತು ನಿಟ್ಟೂರುಗಳಲ್ಲಿ ಸಿಲುಕಿಕೊಂಡಿದ್ದ ಹಲವರಿಗೆ ಕಾಯಕಿಂಗ್ ಮೂಲಕವೇ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಮಹಮ್ಮದ್ ಇಮ್ತಿಯಾಜ್ ಕೆಮ್ಮಣ್ಣು ಹೇಳಿದ್ದಾರೆ. ಅವರ ಸಾಧನೆಗೆ ಈ ಹಿಂದಿನ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಗಣಿಸಿ ಉಡುಪಿ ಜಿಲ್ಲಾಡಳಿತವು ಇಮ್ತಿಯಾಝ್ ಅವರಿಗೆ 2020ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿದೆ, ತಮ್ಮ ಸೇವೆಗೆ ಯಾವತ್ತೂ ಫಲ ಬಯಸಿದೆ ಕೆಲಸ ಮಾಡಿದ್ದಾರೆ, ಯಾರೆ ಅಪತ್ತಿನಲ್ಲಿದ್ದರು, ತಕ್ಷಣ ಧಾವಿಸುವವರು ಇಮ್ತಿಯಾಝ್, ನನಗೆ ಯಾವುದೇ ಹೊತ್ತಿಗೂ ಬೇಕಾದರೂ ಫೋನ್​ ಮಾಡಿ ನಾನು ನಿಮ್ಮ ಸಹಾಯಕ್ಕೆ ಬರುವೇ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ