Advertisement

ಸುಳ್ಯ: ಹಲವು ವರ್ಷಗಳಿಂದೀಚೆಗೆ ಸಮಸ್ಯೆ ಬಗೆ ಹರಿಯದ ತಾಲೂಕು ಕ್ರೀಡಾಂಗಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುರುಗನ್ ಭೇಟಿ ನೀಡಿದ್ದಾರೆ. ಇಂಜಿನಿಯರ್ ಮಹೇಶ್ ರವರಿಂದ ಕ್ರೀಡಾಂಗಣದ ಕುರಿತ ಸಂಪೂರ್ಣ ಮಾಹಿತಿಯನ್ನು ಪಡೆದರು. ಬಳಿಕ ಯಾವ ರೀತಿಯಾಗಿ ಕಾಮಗಾರಿಯನ್ನು ಮುಂದುವರಿಸಬಹುದು, ಎಂಬುದರ ಕುರಿತು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಅದೇ ರೀತಿ ಕ್ರೀಡಾ ಇಲಾಖೆಗೆ ಸಂಬಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ‌ ಕ್ರಮದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೊಬೆಷನರಿ ಡಿ.ಸಿ., ಎ.ಸಿ. ಮಹೇಶ್ ಚಂದ್ರ, ತಹಶೀಲ್ದಾರ್ ಮಂಜುನಾಥ್, ಆರ್.ಐ.ಕೊರಗಪ್ಪ ಹೆಗ್ಡೆ, ತಾಲೂಕು ಸರ್ವೆಯರ್‌ ಜಗದೀಶ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ನ.ಪಂ. ಮಾಜಿ ಅಧ್ಯಕ್ಷ ವಿನಯ ಕಂದಡ್ಕ, ಸದಸ್ಯ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕಾಂಗ್ರೆಸ್ ನಾಯಕರಾದ ಸದಾನಂದ ಮಾವಜಿ, ಟಿ.ಎಂ.ಶಹೀದ್ ತೆಕ್ಕಿಲ್, ಸ್ಥಳೀಯರಾದ ಡಾ.ಸುಂದರ ಕೇನಾಜೆ, ರಶೀದ್ ಶಾಂತಿನಗರ, ಗೌರಿಶಂಕರ್, ನವನೀತ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.

ಜುಲೈ 19 ರಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ: ಯು.ಟಿ.ಖಾದರ್, ದಿನೇಶ್ ಗುಂಡೂರಾವ್, ಎ.ಎಸ್.ಪೊನ್ನಣ್ಣ ಭಾಗಿ

ಇದೇ ಸಂಧರ್ಭದಲ್ಲಿ ಜುಲೈ ೧೯ ರಂದು ನಡೆಯಲಿರುವ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ (ರಿ) ಸುಳ್ಯ ದ ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರಕೆಯನ್ನು ನೀಡಿ ಜಿಲ್ಲಾಧಿಕಾರಿಯವರನ್ನು ಆಹ್ವಾನಿಸಲಾಯಿತು. ಈ ಸಂಧರ್ಭದಲ್ಲಿ ಪತ್ರಕರ್ತ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಳ್ಳಪಳ್ಳಿ, ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ದುರ್ಗಾ ಕುಮಾರ್, ಮತ್ತು ನಿರ್ದೇಶಕರಾದ ಗಣೇಶ್ ಮಾವಂಜಿ ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ