ಕನಕಮಜಲು: ಮನೆ ಬಾಗಿಲು ಮುರಿದು ಚಿನ್ನಾಭರಣ ಎಗರಿಸಿದ ಘಟನೆ ಜು.16 ರಂದು ರಾತ್ರಿ ನಡೆದಿದೆ. ಯುರೇಶ್ ಬುಡ್ಲೆಗುತ್ತು ರವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದರು, ಈ ಸಮಯಕ್ಕೆ ಸರಿಯಾಗಿ ಕಳ್ಳರು, ಯುರೇಶ್ ಬುಡ್ಲೆಗುತ್ತುರವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದ ಒಳ ನುಸುಳಿದ್ದಾರೆ. ಸರಿಸುಮಾರು 30 ಕ್ಕೂ ಹೆಚ್ಚು ಪವನ್ ಚಿನ್ನಾಭರಣ ಕಳವುಗೈದಿದ್ದಾರೆ. ಈ ಕಳ್ಳತನದ ಬಗ್ಗೆ ಸುಳ್ಯ ಪೋಲಿಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ

.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ