Advertisement

ಇಸ್ಲಾಮಾಬಾದ್‌: ಭಾರತದ ಮಹತ್ವಾಕಾಂಕ್ಷೆ ಚಂದ್ರಯಾನ-3 (Chandrayaan-3) ಅನ್ನು ಪಾಕಿಸ್ತಾನದ (Pakistan) ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್‌ ಚೌಧರಿ (Fawad Chaudhry) ಲೇವಡಿ ಮಾಡಿದ್ದಾರೆ. ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಹಾಸ್ಯ ಮಾಡಿದ್ದಾರೆ. ಫವಾದ್ ಅವರ ಸಂದರ್ಶನದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಆದರೆ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರ ಹೇಳಿಕೆಯನ್ನು ಬೆಂಬಲಿಸಿ ವೀಡಿಯೋವನ್ನು ಅನೇಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜು.14 ರಂದು ಚಂದ್ರಯಾನ-3 ಯೋಜನೆಯ ಗಗನನೌಕೆಯನ್ನು ಇಸ್ರೋ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಿತು. ಗಗನನೌಕೆಯು ಕಕ್ಷೆ ಬದಲಿಸುವ ಎರಡನೇ ಹಂತದ ಪ್ರಕ್ರಿಯೆಯು ಸೋಮವಾರ ಯಶಸ್ವಿಯಾಗಿದೆ. ಅಲ್ಲದೇ ಭೂಮಿಯ ಸುತ್ತ ಮೂರನೇ ಕಕ್ಷೆಗೆ ಇಂದು ಗಗನನೌಕೆ ಏರಲಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ