Advertisement
ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ವತಿಯಿಂದ ಪ್ರೊ. ಸಂಜೀವ ಕುದ್ಪಾಜೆ ಮತ್ತು ಜಿಲ್ಲಾ ರೆಡ್ ಕ್ರಾಸ್ ನಿರ್ದೇಶಕ ಪಿ. ಬಿ. ಹರೀಶ್ ರೈ ಗೆ ಸನ್ಮಾನ

ಜೀವ ಉಳಿಸುವ ರಕ್ತದಾನ ಗಳು ಶ್ರೇಷ್ಠ ದೇಶಸೇವೆ :ಭಾಗೀರಥಿ ಮುರುಳ್ಯ
ರಕ್ತದಾನಿಗಳ ಶಿಬಿರವನ್ನು ಸಂಘಟಿಸಿ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ರಕ್ತದಾನದ ಜಾಗೃತಿ ಮೂಡಿಸಿದ ಸಾಧನೆಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ನೆಹರು ಸ್ಮಾರಕ ಮಹಾ ವಿದ್ಯಾಲಯದ ಪ್ರೊ. ಸಂಜೀವ ಕುದ್ಪಾಜೆ, ಮತ್ತು ದಕ ಜಿಲ್ಲಾ ರೆಡ್ ಕ್ರಾಸ್ ನಿರ್ದೇಶಕರಾಗಿ ಆಯ್ಕೆಯಾ ದ ಸುಳ್ಯ ಮೂಲದ ಪತ್ರಕರ್ತ ಪಿ. ಬಿ. ಹರೀಶ್ ರೈ ಯವರಿಗೆ ಭಾರತೀಯ ರೆಡ್ ಕ್ರಾಸ್ ಸುಳ್ಯ ಘಟಕದ ವತಿಯಿಂದ ಸನ್ಮಾನಿಸಲಾಯಿತು
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯರಾದ ಕು. ಭಾಗೀರಥಿ ಮುರುಳ್ಯ ಸನ್ಮಾನಿಸಿದರು
ಸಭಾಧ್ಯಕ್ಷತೆಯನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ವಹಿಸಿದ್ದರು
Advertisement