ಸುಳ್ಯ: ಡಿಸೆಂಬರ್ 7 ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ಕರ್ನಾಟಕ ಆಯೋಜಿಸಿದ ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ 5ನೇ ತರಗತಿಯ ವಿದ್ಯಾರ್ಥಿ
ಉಝೈರ್ ಅಬ್ಬಾಸ್ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ, ಗಾಂಧಿನಗರ ಮದರಸದ ಉಪಾಧ್ಯಾಯರಾದ ಸಿರಾಜುದ್ದೀನ್ ಸಖಾಫಿ ಯವರ ಮಾರ್ಗದರ್ಶನದಲ್ಲಿ ಕಲಿಯುತ್ತಿರುವ ಇವರು ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಸಿದ್ದೀಕ್ ಕೊಡಿಯಮ್ಮೆ ಮತ್ತು ಸೆಮೀಮಾ ದಂಪತಿಗಳ ಪುತ್ರ. ಕೆ.ವಿ.ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಇದರ 5ನೇ ತರಗತಿಯಲ್ಲಿ ಕಲಿಯುತ್ತಿರುವ ಉಝೈರ್, ಗಾಂಧಿನಗರದ ದುಲ್ಪುಕಾರ್ ದಫ್ ಅಸೋಸಿಯೇಷನ್ ನಲ್ಲಿ ದಫ್ ತಾಲೀಮು ಮಾಡುತ್ತಿದ್ದು,
ಪಠ್ಯೇತರ ವಿಷಯದಲ್ಲಿಯೂ ಕೂಡ ಆಸಕ್ತಿ ಹೊಂದಿದ್ದಾರೆ.