ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೆ ಮಳೆಯಾಗುತ್ತಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದ ಬೆಂಗಳೂರು ಹಾಗೂ ಮುಂಬೈನಿಂದ ತೆರಳಿದ್ದ ವಿಮಾನಗಳು ಬೇರೆಡೆಗೆ ಸ್ಥಳಾಂತರಗೊಂಡಿದೆ.
ಹೀಗಾಗಿ ರಾಜ್ಯ ರಾಜಧಾನಿ ಹಾಗೂ ವಾಣಿಜ್ಯ ನಗರಿಯಿಂದ ಆಗಮಿಸುತ್ತಿದ್ದ ಪ್ರಯಾಣಿಕರು ಸಂಚಾರ ವ್ಯತ್ಯದಿಂದಾಗಿ ಸಂಕಷ್ಟಪಡುವಂತಾಗಿದೆ.ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟಿದ್ದ ಇಂಡಿಗೋ ವಿಮಾನವು ಮಂಗಳೂರು ತಲುಪುವ ಮುನ್ನವೇ ಪ್ರತಿಕೂಲ ಹವಾಮಾನದ ಹಿನ್ನೆಲೆ ಮಂಗಳೂರಿನಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿತು. ಇದನ್ನ ಮನಗಂಡ ಪೈಲಟ್‌ಗಳು ಮಂಗಳೂರಿನಲ್ಲಿ ಲ್ಯಾಂಡಿಂಗ್ ಮಾಡದೇ ಅಲ್ಲಿಂದಲೇ ನೇರವಾಗಿ ನೆರೆಯ ಕೇರಳದ ಕಣ್ಣೂರು ಏರ್‌ಪೋರ್ಟ್‌ಗೆ ವಿಮಾನವನ್ನು ಡೈವರ್ಟ್ ಮಾಡಿದ್ದಾರೆ. ಬೆಳಿಗ್ಗೆ 9.55ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು 11 ಗಂಟೆಗೆ ಮಂಗಳೂರಿನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಇದೇ ವಿಮಾನದಲ್ಲಿ ಆರೋಗ್ಯ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಕೂಡಾ ಇದೇ ವಿಮಾನದಲ್ಲಿ ಪಯಣ ಬೆಳೆಸಿದ್ದರು. ಪ್ರತಿಕೂಲ ಹವಾಮಾನ ಪರಿಸ್ಥಿತಿ ತಿಳಿಗೊಂಡಲ್ಲಿ ಕಣ್ಣೂರಿನಿಂದ ಮಂಗಳೂರಿಗೆ ವಿಮಾನವು ಲ್ಯಾಂಡಿಂಗ್ ಆಗಲಿದೆ ಎನ್ನಲಾಗಿದೆ