Advertisement


ಜಕಾರ್ತ: ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಪ್ಲೇಯರ್ಸ್‌ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್‌ ಶೆಟ್ಟಿ (Chirag Shetty) ಜೋಡಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಕಳೆದ ತಿಂಗಳಷ್ಟೇ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸೂಪರ್‌-1000 (Indonesia Open 2023) ಈವೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಈ ಜೋಡಿ ಇದೇ ಮೊದಲಬಾರಿಗೆ ಪ್ರತಿಷ್ಠಿತ ಕೊರಿಯ ಓಪನ್-500 (Korea Open 2023) ಪ್ರಶಸ್ತಿ ಗೆದ್ದುಕೊಂಡು, ಸಾಧನೆ ಮಾಡಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲೇ ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ (BWF) ವಿಶ್ವಟೂರ್‌ ಗೆದ್ದ ವಿಶೇಷ ಸಾಧನೆಯನ್ನೂ ಈ ಜೋಡಿ ಮಾಡಿದೆ. ಭಾನುವಾರ (ಜು.23) ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ ಜೋಡಿಯನ್ನು ಬಗ್ಗು ಬಡಿದು ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಭರ್ಜರಿ ಪ್ರದರ್ಶನ ನೀಡಿದ್ದ ಸಾತ್ವಿಕ್‌-ಚಿರಾಗ್‌ ಎದುರಾಳಿಗಳನ್ನ 17-21, 21-13, 21-14 ಅಂತರದಲ್ಲಿ ಸೋಲಿಸಿದ್ದಾರೆ. ಆರಂಭದಲ್ಲಿ ಆರಂಭಿಕ ಗೇಮ್ಸ್‌ನಲ್ಲಿ 17-21 ಅಂತರದಲ್ಲಿ ಸೋತರೂ, ಮುಂದಿನ ಹಂತಗಳಲ್ಲಿ ಉತ್ತಮ ಕಂಬ್ಯಾಕ್‌ ಮಾಡುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ 17-21 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತದ ಜೋಡಿ ಸೋಲುವುದು ಪಕ್ಕಾ ಎಂದು ಹೇಳಲಾಗಿತ್ತು. ಆದ್ರೆ 2-3ನೇ ರೌಂಡ್ಸ್‌ನಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾದರು. ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇದೇ ವರ್ಷ ಇಂಡೋನೇಷ್ಯಾ ಸೂಪರ್‌ 1000 ಹಾಗೂ ಸ್ವಿಸ್‌ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ ತಮ್ಮ ಅನುಭವದ ಆಟಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡಿ ಕೊರಿಯಾ ಓಪನ್​ ಟೂರ್ನಿಯನ್ನು ಗೆದ್ದು ವರ್ಷದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಇದರೊಂದಿಗೆ 2024ಕ್ಕೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ