ಧಾರವಾಡ: ಸೋಶಿಯಲ್ ಮೀಡಿಯಾದಲ್ಲಿ (Social Media) ಲೈಕ್ಸ್ ಗಿಟ್ಟಿಸಿಕೊಳ್ಳುವ ಸಲುವಾಗಿ ಕಾಲೇಜು ಹುಡುಗಿಯರನ್ನು ಚುಡಾಯಿಸುವ ವೀಡಿಯೋ (Video) ಮಾಡಿ ಹಂಚಿಕೊಳ್ಳುತ್ತಿದ್ದ ಯುವಕರ ತಂಡಕ್ಕೆ ಧಾರವಾಡ ನಗರ ಠಾಣೆ ಪೊಲೀಸರು (Dharwad Police) ಬಿಸಿ ಮುಟ್ಟಿಸಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರನ್ನು ಧಾರವಾಡ ನಗರ ಠಾಣೆ ಪೊಲೀಸರು ಬಂಧಿಸಿದ್ದು, ನಂತರ ಬಿಫೋರ್, ಆಫ್ಟರ್ ವೀಡಿಯೋ ಮಾಡಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೋಗಿ ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅದರಲ್ಲೂ ಯುವಕರು ಏನೇನೋ ಮಾಡಲು ಹೋಗಿ ಪೊಲೀಸರಿಂದ ಹೊಡೆತ ತಿನ್ನುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಧಾರವಾಡದ ಮೂವರು ಯುವಕರು ಸೇರ್ಪಡೆಯಾಗಿದ್ದಾರೆ. 2 ದಿನಗಳ ಹಿಂದೆ ಧಾರವಾಡದ ಕಾಲೇಜೊಂದರ ಬಳಿ ಹೋಗುತ್ತಿದ್ದ ವಿದ್ಯಾರ್ಥಿನಿಯರ ಗುಂಪಿನ ಹಿಂದೆ ಬೈಕ್ ಮೇಲೆ ಬಂದ ಓರ್ವ ಯುವಕ ಅವರ ಸಮೀಪ ಬರುತ್ತಿದ್ದಂತೆಯೇ ಜೋರಾಗಿ ಚೀರಿ ಅವರು ಹೆದರಿದಾಗ ವಿಕೃತ ಆನಂದ ಪಡೆದಿದ್ದ.

ಈ ದೃಶ್ಯವನ್ನು ಛೇಡಿಸಿದ ಯುವಕನ ಸ್ನೇಹಿತ ಮತ್ತೊಂದು ಬೈಕ್ ಮೇಲೆ ಕುಳಿತುಕೊಂಡು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಖುಷಿ ಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇಂತಹ ಹುಚ್ಚಾಟಗಳನ್ನು ಮಾಡುತ್ತಿದ್ದ ಮೂವರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ನಿತ್ಯವೂ ಈ ರೀತಿ ಮಾಡಿ, ವೀಡಿಯೋವನ್ನು ಟ್ವಿಟ್ಟರ್‌ಗೆ ಹಾಕಿ ವಿಕೃತ ಆನಂದ ಪಡೆಯುತ್ತಿದ್ದ ಧಾರವಾಡ ನಗರದ ಅಹ್ಮದ್ ಖಾತರ್, ಜುನೇದ್ ಸೌದಾಗರ್, ಮನ್ಸೂರ್ ಶಿರಹಟ್ಟಿ ಎಂಬುವವರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಪೊಲೀಸರು ಅವರನ್ನು ಅಷ್ಟಕ್ಕೇ ಬಿಟ್ಟಿಲ್ಲ. ಕೇಸು ದಾಖಲಿಸಿದ ಬಳಿಕ ಅದೇ ಯುವಕರ ವೀಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಬುದ್ಧಿ ಕಲಿಸಿದ್ದಾರೆ. ಯುವಕರ ವೀಡಿಯೋಗೆ ಪೊಲೀಸರು ಪ್ರತಿ ವೀಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಕೆಲವು ವೀಡಿಯೋಗಳು ವೈರಲ್ ಆಗುವ ರೀತಿಯಲ್ಲಿಯೇ ಪೊಲೀಸರು ಬಿಫೋರ್, ಆಫ್ಟರ್ ಎಫೆಕ್ಟ್ ಹಾಕಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವೀಡಿಯೋವನ್ನು ಪೊಲೀಸರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಟ್ವಿಟ್ಟರ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ