Advertisement

ಕಾಸರಗೋಡು: ನಾಪತ್ತೆಯಾಗಿದ್ದ ಯುವಕ, ಇದೀಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ, ಆದೂರು ಎಂಬಲ್ಲಿ ನಡೆದಿದೆ. ಬಿ.ಎ ಖಾಸಿಂ (28) ಎಂಬುವವನೆ ಮೃತಪಟ್ಟ ದುರ್ದೈವಿ‌. ಖಾಸಿಂ ಜು.21 ರಿಂದ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು, ಕೋಝಿಕ್ಕೋಡ್ ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದ, ಈ ಖಾಸಿಂ ಇತ್ತೀಚಿಗೆ ಮನೆಗೆ ಬಂದಿದ್ದನು. ಯುವಕ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ಕೂಡಾ ನೀಡಿದ್ದು, ಪೊಲೀಸ್ ಹಾಗೂ ಸ್ಥಳೀಯರು ನಿರಂತರ ಹುಟುಕಾಟದಲ್ಲಿ ತೊಡಗಿದ್ದರು. ಈ ವೇಳೆ ಆದೂರು ಚೆಕ್ ಪೋಸ್ಟ್ ಬಳಿಯ ಬಾವಿಯಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ