ಸರ್ವಧರ್ಮ ಸೌಹಾರ್ದತೆ ಸುಳ್ಯದ ಅಭಿವೃದ್ಧಿಗೆ ಪೂರಕ ಸುಳ್ಯದ ವಿದ್ಯಾ ಸಂಸ್ಥೆ ಗಳಲ್ಲಿ ಕೇರಳ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದು ಇಲ್ಲಿನ ಸೌಹಾರ್ದತೆ ವಾತಾವರಣ ಜಿಲ್ಲೆಗೆ ಮಾದರಿ ಎಂದು ಸನ್ಮಾನ ಸ್ವೀಕರಿಸಿದ ಸಚಿವರಾದ ಅಹಮದ್ ದೇವರ ಕೊವಿಲ್ ಹೇಳಿದರು. ಸುಳ್ಯಕ್ಕೆ ಭೇಟಿ ನೀಡಿದ ಸಚಿವರನ್ನು ಮತ್ತು ಕೇರಳ ಸಮಸ್ತ ಮುಷಾವರ ಸದಸ್ಯರಾದ ಝೆಯಿನುಲ್ ಅಭಿದೀನ್ ತಂಞಳ್ ರನ್ನು ಹರ್ಲಡ್ಕ ವಿಲ್ಲಾ ದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ. ಎಂ. ಶಹೀದ್,ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ, ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಕೇಂದ್ರದ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಪ್ರದಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಖಜಾಂಚಿ ಆದಂ ಹಾಜಿ ಕಮ್ಮಾಡಿ, ಉಪಾಧ್ಯಕ್ಷ ಎಸ್. ಪಿ.ಅಬೂಬಕ್ಕರ್, ನಿರ್ದೇಶಕರು ಗಳಾದ ಶಾಫಿ ಕುತ್ತಾಮೊಟ್ಟೆ, ಸಿದ್ದೀಕ್ ಕೊಕ್ಕೋ , ಸಲಹಾ ಸಮಿತಿ ಸದಸ್ಯರಾದ ಬಾಬಾಹಾಜಿ ಎಲಿಮಲೆ, ಉದ್ಯಮಿ ಯೂಸುಫ್ ಜಿರ್ಮುಕಿ,ಸಿದ್ದೀಕ್ ಕಟ್ಟೆಕ್ಕಾರ್ಸ್, ಮೊದಲಾದವರು ಉಪಸ್ಥಿತರಿದ್ದರು.
Advertisement
Advertisement