Advertisement
ಸುಳ್ಯ ಗಾಂಧಿನಗರ ನಾವೂರು – ಬೋರುಗುಡ್ಡೆ ರಸ್ತೆ ಅಭಿವೃದ್ಧಿಗೆ ಸುಳ್ಯ ನಗರ ಪಂಚಾಯತ್ ನಾವೂರು ವಾರ್ಡ್ ಸದಸ್ಯ ಶರೀಫ್ ಕಂಠಿಯವರು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರ ಮೂಲಕ ಸುಳ್ಯ ಶಾಸಕರು ಸಚಿವರಾದ ಅಂಗಾರ ಇವರಲ್ಲಿ ಮನವಿ ಮಾಡಿಕೊಂಡಿದ್ದರು. ಸುಳ್ಯ ನಗರ ಪಂಚಾಯತ್‌ಗೆ ಮುಖ್ಯಮಂತ್ರಿಗಳ ನಗರೋತ್ಥಾನ 4ರ ಯೋಜನೆ ಅಡಿಯಲ್ಲಿ ಸಚಿವರಾದ ಅಂಗಾರ’ರವರು ಸುಮಾರು 5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ.
ಇದರಲ್ಲಿ ನಾವೂರುನಿಂದ ಗಾಂಧಿನಗರ ಕಡೆಗೆ ಬರುವ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ಅನುದಾನವನ್ನು ನೀಡಿದ್ದಾರೆ ಎಂದು ನಾವೂರು ವಾರ್ಡ್ ಸದಸ್ಯ ಶರೀಫ್ ಕಂಠಿ ತಿಳಿಸಿದ್ದಾರೆ.
Advertisement