ಆಪರೇಷನ್ ಸ್ಮೈಲ್ ಆರೋಗ್ಯ ಸೇವೆ ಫಲಾನುಭವಿ ಜೀವನ ಪರ್ಯಂತ ನೆನಪಿಡುವ ಕಾರ್ಯ: ಕೆ.ಎಂ. ಮುಸ್ತಫ
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಮತ್ತು ಕಾಸರಗೋಡು ತಾಲೂಕು ಮುಳಿಯಾರ್ ಬಳಿ ಇರುವ ಮಕ್ಕಳ ಆರೋಗ್ಯ ಸೇವೆಯ ಕೇಂದ್ರ ಅಕ್ಕರ ಫೌಂಡೇಶನ್ ವತಿಯಿಂದ ಉಚಿತ ಸೀಳುತುಟಿ ತಪಾಸಣೆ ಶಿಬಿರ ಸುಳ್ಯ ಅನ್ಸಾರಿಯಾ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.
ಚಿಕಿತ್ಸೆಗೆ ಅರ್ಹರಿಗೆ ಉಚಿತ ಶಸ್ತ್ರ ಚಿಕಿತ್ಸೆ ಯನ್ನು ಮಾಡಿ ಕೊಡಲಾಗುವುದು ಎಂದು ಅಕ್ಕರ ಫೌಂಡೇಶನ್ ಸಂಚಾಲಕ
ಸುಬಿನ್ ಹೇಳಿದರು. ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ಶಿಬಿರ ಉದ್ಘಾಟಸಿದರು. ಅಕ್ಕರ ಫೌಂಡೇಶನ್ ಪ್ರಾಜೆಕ್ಟ್ ಮ್ಯಾನೇಜರ್ ರಾಶಿದ್ ವಿಷಯ ಪ್ರಸ್ತಾವನೆಗೈದರು. ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರದ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ,ಅನ್ಸಾರ್ ಪದಾಧಿಕಾರಿಗಳಾದ ಎನ್. ಎ. ಜುನೈದ್, ಹನೀಫ್ ಬಿ. ಎಂ, ಸಂಶುದ್ದೀನ್ ಕೆ. ಎಂ., ನಿರ್ದೇಶಕರುಗಳಾದ ಹಾಜಿ ಹಮೀದ್ ಜನತಾ,ಶಾಫಿ ಕುತ್ತಾಮೊಟ್ಟೆ,ಕೆ. ಬಿ. ಇಬ್ರಾಹಿಂ, ಬಶೀರ್ ಸಪ್ನ, ಎಸ್. ಪಿ. ಅಬೂಬಕ್ಕರ್, ಶಹೀದ್ ಪಾರೆ, ಸಿದ್ದೀಕ್ ಕಟ್ಟೆಕ್ಕಾರ್ಸ್, ನಿಜಾರ್ ಸಖಾಫಿ ದುವಾ ನೆರವೇರಿಸಿದರು, ಲತೀಫ್ ಸಖಾಫಿ ಗೂನಡ್ಕ ಶುಭಕೋರಿದರು. ಕಾರ್ಯದರ್ಶಿ ಬಿ. ಎಂ. ಹನೀಫ್ ಸ್ವಾಗತಿಸಿ, ಕಚೇರಿ ವ್ಯವಸ್ಥಾಪಕ ಮುನೀರ್ ಜಿ. ಕೆ. ವಂದಿಸಿದರು.