Advertisement

ದಾವಣಗೆರೆ: ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ ವಿಚಿತ್ರ ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತಿದೆ. ದಾವಣಗೆರೆ ಜಿಲ್ಲಾಸ್ಪತ್ರೆಗೆ ದಿ‌ನ ನಿತ್ಯ 30 ರಿಂದ 40 ಸೋಂಕಿತ ಮಕ್ಕಳು ವಯಸ್ಕರು ಚಿಕಿತ್ಸೆಗಾಗಿ ದಾಂಗುಡಿ ಇಡುತ್ತಿದ್ದಾರೆ‌.  ಹೆಚ್ಚಾಗಿ ಐ ವೈರಸ್ ಸೋಂಕು10 ರಿಂದ 18 ವಯಸ್ಸಿನ ಮಕ್ಕಳಲ್ಲಿ‌  ಕಾಣಿಸಿಕೊಳ್ಳುತ್ತಿದೆ, ಇಲ್ಲಿ ತನಕ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದು ವೈದ್ಯರ ವಾದವಾಗಿದೆ. ಈ ಐ ವೈರಸ್ ಸೋಂಕಿನಿಂದ ಆತಂಕದಲ್ಲಿರುವ ಪೋಷಕರು ಕಣ್ಣಿನ ವೈದ್ಯರನ್ನು ಕಾಣಲು ಮುಗಿಬೀಳುತ್ತಿದ್ದಾರೆ. ಇನ್ನೂ ಈ ಸೋಂಕು ಮದ್ರಾಸ್ ಐ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಕ್ಕಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರಿಂದ ಮುಂಜಾಗ್ರತಾ ಕ್ರಮ ವಹಿಸಿ ಎಂದು ಕಣ್ಣೀನ ವೈದ್ಯರು ಒತ್ತಾಯಿಸುತ್ತಿದ್ದಾರೆ. ಈ ಕಣ್ಣೀನ ಸೋಂಕು ಕಾಣಿಸಿಕೊಂಡರೆ ಕಣ್ಣಿನಲ್ಲಿ ಪಿಸುರು ಬರುವುದು, ಕಣ್ಣು ಊದಿಕೊಳ್ಳುವುದು. ಕಣ್ಣು ಕೆಂಪಾಗುವ ಐ ವೈರಸ್ ಗುಣಲಕ್ಷಣ ಎಂದು ವೈದ್ಯರು ತಿಳಿಸಿದ್ದಾರೆ.‌ ಇನ್ನು ಕಳೆದ 10 ದಿನಗಳಿಂದ ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಿವ ಐ ವೈರಸ್ ಶಾಲೆ, ಹಾಸ್ಟೆಲ್ ಗಳಲ್ಲಿರುವ ಮಕ್ಕಳಲ್ಲಿ ಹೆಚ್ಚಾಗಿ ಹಬ್ಬಿದೆ. ಜಿಲ್ಲೆಯಲ್ಲಿ ಕೆಲ ಮಕ್ಕಳಲ್ಲಿ ಐ ವೈರಸ್ ಕಾಣಿಸಿಕೊಂಡ ಬೆನ್ನಲ್ಲೆ ಅಂತಹ ಮಕ್ಕಳಿಗೆ ಒಂದು ವಾರ ಶಾಲೆಗೆ ಬಾರದಂತೆ ಶಾಲೆಯ ಆಡಳಿತ ಮಂಡಳಿ  ಪೋಷಕರಿಗೆ ಸೂಚನೆ ನೀಡಿದೆ.‌ ಮಕ್ಕಳಿಗೆ ಹೆಚ್ಚು ವೈರಸ್ ಕಾಣಿಸಿಕೊಳ್ಳುತ್ತಿದ್ದರಿಂದ‌ ಪೋಷಕರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.‌ ದಾವಣಗೆರೆ ಜಿಲ್ಲಾ ಸಿಜಿ ಆಸ್ಪತ್ರೆಯ ನೇತ್ರ ತಜ್ಞ ಡಾ ಎಸ್ಎಸ್ ಕೋಳಕೂರ್ ರವರು ಪ್ರತಿಕ್ರಿಯಿಸಿ ಇದೊಂದು ಅಂಟು ರೋಗ ಇದ್ದಂತೆ‌. ನಮ್ಮ ಜಿಲ್ಲಾಸ್ಪತ್ರೆಯ ಹೊರರೋಗಿಗಳ ಕಣ್ಣೀನ ವಿಭಾಗದಲ್ಲಿ ಇಲ್ಲಿತನಕ ಆರು ನೂರಕ್ಕು ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಇದಕ್ಕೆ ಮದ್ರಾಸ್ ಐ ಎಂದು ಕರೆಯುತ್ತೇವೆ, ಇದೊಂದು ಸಾಂಕ್ರಾಮಿಕ ರೋಗ,ಈ ಸೋಂಕಿನಲ್ಲಿ ಕಣ್ಣು ಕೆಂಪುಗಾಗುವುದು, ಕಣ್ಣು ಚುಚ್ಚುವುದು, ಕಣ್ಣು ಮಂಜು ಕಾಣುವುದು, ಹಾಗು ಕಣ್ಣೀನಲ್ಲಿ ಪಿಸು ಬರುವುದು ರೋಗ ಲಕ್ಷಣಗಳಾಗಿವೆ. ಜುಲೈ 17 ರ ತನಕ ಜಿಲ್ಲೆಯಲ್ಲಿ ವಿಪರೀತ ಪ್ರಕರಣಗಳು ಕಂಡುಬಂದಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿರುವ ರೀತಿ ಕಾಣ್ತಿದೆ. ಇನ್ನು ಮದ್ರಾಸ್ ಐ ಬಂದಿರುವ ವ್ಯಕ್ತಿ ಬಳಕೆ ಮಾಡಿರುವ ವಸ್ತುಗಳನ್ನು ಬೇರೊಬ್ಬರು ಬಳಕೆ‌ ಮಾಡಿದ್ರೇ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತಿವೆ ಎಂದರು. ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಏಕೆ?:
ಜಿಲ್ಲಾಸ್ಪತ್ರೆಗೆ ಪ್ರತಿದಿನ 30 ರಿಂದ 40 ಪ್ರಕರಣಗಳು ಕಂಡು ಬರುತ್ತಿದ್ದು, ಖಾಸಗಿ ಕಣ್ಣೀನ ಆಸ್ಪತ್ರೆಗೆ ಭೇಟಿ ನೀಡ್ತಿರುವವರು ಕೂಡ  ಹೆಚ್ಚಿದ್ದಾರೆ. ಈ ವೇಳೆ ಮಾತನಾಡಿದ ನೇತ್ರ ತಜ್ಞ ಡಾ ಎಸ್ಎಸ್ ಕೋಳಕೂರ್ ರವರು ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಈ ವೈರಾಣು ಹೆಚ್ಚು ಕಾಣಿಸಿಕೊಳ್ಳುತ್ತದೆ, ಅಷ್ಟೇ  ವೇಗವಾಗಿ ಒಬ್ಬರಿಗೊಬ್ಬರಿಗೆ ಹರಡುತ್ತದೆ.‌ ಇನ್ನು ಈ ಸೋಂಕು 10 ರಿಂದ 18 ವರ್ಷದ ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹಾಸ್ಟಲ್  ಹಾಗು ಶಾಲೆಗಳ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ, ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಹೋರರೋಗಿಗಳ ಭಾಗದಲ್ಲಿ ಪ್ರತ್ಯೇಕ ಕೌಟಂರ್ ತೆರೆಯಲಾಗಿದೆ. ಬರುವ ರೋಗಿಗಳಿಗೆ ತಜ್ಞರು ನೋಡಿ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಾಗೃತಿ ಮೂಡಿಸುತ್ತಿದ್ದೇವೆ, ಇನ್ನು ಸೋಂಕು ಬಂದ್ರೇ ಕೂಡ ಮೂರ್ನಾಲ್ಕು ದಿನಗಳಲ್ಲಿ ವಾಸಿಯಾಗಲಿದೆ‌, ತಕ್ಷಣ ಆಸ್ಪತ್ರೆ ಭೇಟಿ ನೀಡಿ ನೇತ್ರಾ ತಜ್ಞರನ್ನು ತೋರಿಸ್ಬೇಕು ಎಂದರು. ವೈರಸ್ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ!
ಇನ್ನು ಈ ಸೋಂಕು ಬರದೆ ಇರುವ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಪಾಲಿಸಬೇಕು, ಯಾರಿಗೆ ಸೋಂಕು ಬಂದಿದೆ ಅತಂಹವರು ಉಪಯೋಗಿಸುವ ವಸ್ತುಗಳನ್ನು ಬೇರೊಬ್ಬರು ಬಳಕೆ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು ಉತ್ತಮ, ಒಬ್ಬರಿಗೊಬ್ಬರು ನೋಡುವುದ್ದರಿಂದ ಬರುತ್ತೇ ಎಂದು ಜನ ಕೇಳ್ತಿದ್ದಾರೆ ಅದ್ರೇ ಅರೀತಿ ಸೋಂಕು ಬರಲು ಸಾಧ್ಯವಿಲ್ಲ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ