ಭಾರಿ ಮಳೆಯಿಂದ ಹಾನಿಗೊಳಗಾಗಿದ್ದ ಹರಿಹರಪಲ್ಲತ್ತಡ್ಕ ಮತ್ತು ಕೊಲ್ಲಮೊಗ್ರದ ಬೆಂಡೋಡಿಗೆ ಭಾಗಕ್ಕೆ ಕೆಪಿಸಿಸಿ ವಕ್ತಾರ ಕೃಷ್ಣಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ನೇತೃತ್ವದ ಕಾಂಗ್ರೆಸ್ ನಿಯೋಗ ಜುಲೈ 29 ರಂದು ಭೇಟಿ ನೀಡಿತ್ತು.

ಬರೆ ಜರಿದು ಕಟ್ಟಡಕ್ಕೆ ಅಪಾಯ ಇರುವಲ್ಲಿಗೆ ಅದೇ ರೀತಿ ಕೊಲ್ಲಮೊಗ್ರದ ಬೆಂಡೋಡಿ ಸೇತುವೆಯ ಸಂಪರ್ಕ ರಸ್ತೆ ಕಡಿದುಕೊಂಡದನ್ನು ವೀಕ್ಷಸಿದ ನಿಯೋಗ, ಇದಕ್ಕೆ ಬೇಕಾದ ಅನುದಾನ ಒದಗಿಸಲು ಪಯತ್ನಿಸುವುದಾಗಿ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಜಿಲ್ಲಾಧಿಕಾರಿಯವರನ್ನು ಇಲ್ಲಿಗೆ ಕರೆತರುವ
ಪಯತ್ನ ಮಾಡುವುದಾಗಿ ಇದೇ ಸಂದರ್ಭ ತಿಳಿಸಿದ್ದಾರೆ
ಎನ್ನಲಾಗಿದೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ
ಮಣಿಕಂಠ ಕೊಳಗೆ, ದಿನೇಶ್ ಮಡ್ತಿಲ, ಸತೀಶ್
ಕೂಜುಗೋಡು, ಬೆಳ್ಯಪ್ಪ ಖಂಡಿಗೆ, ಯಶೋಧರ ಬಾಕಿಲ, ಪ್ರಶಾಂತ್ ಕೋಡಿಬೈಲು, ಶಿವರಾಮ ರೈ, ಪ್ರಜ್ವಲ್ ಕಜೋಡಿ ಮತ್ತಿತರರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ