Advertisement
ಬೆಂಗಳೂರು: ಈಗಾಗಲೇ ಗಗನದತ್ತ ಮುಖ ಮಾಡಿದ್ದ ಟೊಮೆಟೋ ದರ ಮತ್ತಷ್ಟು ಏರಿಕೆ ಕಂಡಿದೆ. ಮೊದಲೇ ಕಂಗಾಲಾಗಿದ್ದ ಗ್ರಾಹಕರಿಗೆ ದರ ಏರಿಕೆ ಮತ್ತಷ್ಟು ಶಾಕ್ ನೀಡಿದೆ. ನಾಟಿ ಟೊಮೆಟೋ ಕೆಜಿಗೆ 140 ರಿಂದ 150 ರೂ.ಗೆ ಹಾಗೂ ಫಾರ್ಮ್ ಟೊಮೆಟೋ 120 ರಿಂದ 130 ರೂ.ಗೆ ಏರಿಕೆ ಕಂಡಿದೆ. ಇದರಿಂದ ಟೊಮೆಟೋ ಮಾರಾಟಗಾರರ ಅದೃಷ್ಟ ಶುಕ್ರದೆಸೆಗೆ ತಿರುಗಿದೆ. ಇನ್ನೊಂದೆಡೆ ಗ್ರಾಹಕರಿಗೆ ಗಗನ ಕುಸುಮವಾಗಿ ಕಾಡಿದೆ ಕಳೆದ ಒಂದು ವಾರದ ಹಿಂದೆ ಕೆಜಿಗೆ 70-80 ರೂ.ಗೆ ಇದ್ದ ಟೊಮೆಟೋ ದರ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಈ ಬಾರಿ ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಜಡಿ ಮಳೆಯಿಂದಾಗಿ ಒಂದಷ್ಟು ಕಡೆ ಬೆಲೆ ಹಾನಿಯಾಗಿದ್ದು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಇದರಿಂದ ಕೆಲವು ಮಾರುಕಟ್ಟೆಗಳಿಗೆ ಟೊಮೆಟೋ ಪೂರೈಕೆಯೇ ಆಗಿಲ್ಲ.
Advertisement