ಖ್ಯಾತ ಡಬ್ಲ್ಯೂಡಬ್ಲ್ಯೂಇ (WWE) ಕುಸ್ತಿಪಟು ರೇ ಮಿಸ್ಟೀರಿಯೊ ಸೀನಿಯರ್ ಶುಕ್ರವಾರ (ಡಿ.20) ನಿಧನರಾಗಿದ್ದಾರೆ ಎಂದು ಅವರು ಕುಟುಂಬ ತಿಳಿಸಿದೆ. ರೇ ಮಿಸ್ಟೀರಿಯೊ ಸೀನಿಯರ್ ಮೆಕ್ಸಿಕನ್ ವೃತ್ತಿಪರ ಕುಸ್ತಿ ‘ಲುಚಾ ಲಿಬ್ರೆ’ಯಲ್ಲಿ ಖ್ಯಾತಿ ಗಳಿಸಿದ್ದರು. ಮುಖ್ಯವಾಗಿ ಡಬ್ಲ್ಯೂಡಬ್ಲ್ಯೂಇ (WWE)ನಲ್ಲಿ ಪ್ರಸಿದ್ದರಾಗಿದ್ದಾರೆ. ಖ್ಯಾತ ಮೆಕ್ಸಿಕನ್ ಕುಸ್ತಿಪಟು ರೇ ಮಿಸ್ಟೀರಿಯೊ ಜೂನಿಯ‌ರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ 66ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ‘ಮಿಗುಯೆಲ್ ಏಂಜೆಲ್ ಲೋವೆಜ್ ಡಯಾಸ್’ ಎಂಬುದು ಇವರ ನಿಜವಾದ ಹೆಸರು. ನಿಧನದ ಸುದ್ದಿಯನ್ನು ಲುಚಾ ಲಿಬ್ರೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. ರೇ ಮಿಸ್ಟೀರಿಯೊ ಸೀನಿಯರ್ 1976 ವೃತ್ತಿ ಜೀವನ ಆರಂಭಿಸಿ 2023ರಲ್ಲಿ ಕುಸ್ತಿಯಿಂದ ನಿವೃತ್ತಿ ಹೊಂದಿದ್ದರು.ರೇ ಮಿಸ್ಟೀರಿಯೊ ಸೀನಿಯರ್ ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ, ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್(WWE) ಸೇರಿ ಹಲವು ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1990ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ವ್ರೆಸ್ಲಿಂಗ್‌ನ ಸ್ಟಾರ್‌ಕೇಡ್‌ನಂತಹ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಎತ್ತರಕ್ಕೆ ಹಾರುವ ಶೈಲಿ, ನಿರಂತರ ಮುಖವಾಡ ಧರಿಸುತ್ತಿದ್ದ ಕಾರಣಕ್ಕೆ ಸಾಕಷ್ಟು ಹೆಸರುವಾಸಿಯಾಗಿದ್ದರು. ಈ ಕಾರಣಕ್ಕಾಗಿಯೇ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.

Leave a Reply

Your email address will not be published. Required fields are marked *