Advertisement

ಸುಬ್ರಹ್ಮಣ್ಯ ಡಾಕ್ಟರ್ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ಸುಬ್ರಹ್ಮಣ್ಯದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ| ರವಿ ಕಕ್ಕೆಪದವರು ಎಲ್ಲರನ್ನೂ ಬರಮಾಡಿಕೊಂಡರು. ಆರಂಭದಲ್ಲಿ ಸೀನಿಯರ್ ಚೇಂಬರ್ ನ ಅಧ್ಯಕ್ಷರು ಸೀನಿಯರ್, ವಿಶ್ವನಾಥ ನಡು ತೋಟ ಸ್ವಾಗತಿಸಿ ಕಾರ್ಗಿಲ್ 24
ವರ್ಷಗಳ ಹಿಂದೆ ನಡೆದಂತ ಕಾರ್ಗಿಲ್ ಯುದ್ಧದಲ್ಲಿ ಭಾರತದ ಯೋಧರು ತೋರಿಸಿದ ಪರಾಕ್ರಮ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿದಂತಹ ಆ ಸಂದರ್ಭವನ್ನು ನೆನೆಸುತ್ತಾ ಇಂದು ದೇಶಾದ್ಯಂತ ಕಾರ್ಗಿಲ್ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದರು. ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ನಿಕಟ ಪೂರ್ವ ಅಧ್ಯಕ್ಷರು ಗೋಪಾಲ ಎಣ್ಣೆ ಮಜಲ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕಾರ್ಗಿಲ್ ನ ವಿಜಯದ ನೆನಪುಗಳನ್ನು ಮೆಲಕು ಹಾಕಿದರು. ಸುಬ್ರಹ್ಮಣ್ಯದ ಹಿರಿಯರಾದ ರಮಾನಂದ ಪದೇಲ ಅವರು ದೀಪವನ್ನು ಬೆಳಗಿಸಿ ಪುಷ್ಪಾರ್ಚನೆ
ನೆರವೇರಿಸಿದರು ನಂತರ ಡಾ ರವಿ ಕಕ್ಕೆ ಪದ ಟ್ರಸ್ಟ್ ನ ಸದಸ್ಯರ ರೂ ಹಾಗೂ ಸಭೆಯಲ್ಲಿ ಹಾಜರಿದ್ದ ಎಲ್ಲರೂ ಪುಷ್ಪಾರ್ಚನೆ ಮಾಡಿದರು.

ಇಲೆಕ್ಟ್ರಾನಿಕ್ ಪ್ರೌಡಕ್ಟ್ಸ್’ಗಳಲ್ಲಿ ಒರಿಜಿನಲ್ ಅಥವಾ ಡೂಪ್ಲಿಕೇಟ್ ಹೇಗೆ ಕಂಡುಹಿಡಿಯುವುದು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆಸಿಐನ ಪೂರ್ವ ಅಧ್ಯಕ್ಷ ಜೆಸಿ ಮಣಿಕಂಠ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷ ರೋ ಪ್ರಶಾಂತ್ ಕೋಡಿಬೈಲು, ಶೇಷಪ್ಪ ಗೌಡ ಕುಮಾರಧಾರ, ಕುಕ್ಕೆ ಶ್ರೀ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ವಿವೇಕ್ ದೇವರಗದ್ದೆ, ರೋಟರಿ ಪೂರ್ವ ಅಧ್ಯಕ್ಷರು ಮಾಯಿಲಪ್ಪ ಸಂಕೇಶ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭೂಸೇನೆಯಲ್ಲಿ ಹವಾಲ್ದಾರರಾಗಿದು ನಿವೃತ್ತರಾದ ಕುಲುಕುಂದದ ದಿನೇಶ್ ಹಾಗೂ ಯತೀಶ್ ಪಳ್ಳಿ ಗದ್ದೆ ಇವರುಗಳನ್ನ ಸನ್ಮಾನಿಸಲಾಯಿತು. ನಿವೃತ್ತ ಹವಾಲ್ದಾರಾದ ದಿನೇಶ್ ರವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ಸೈನಿಕರ ಪರಾಕ್ರಮವನ್ನು ಅಲ್ಲದೆ ಯುದ್ಧಭೂಮಿಯನ್ನು ವಶಪಡಿಸಿಕೊಂಡ ಬಗ್ಗೆ ಮಾತನಾಡಿ ವೀರಮರಣವನ್ನು ದೇಶಕ್ಕಾಗಿ ಅರ್ಪಿತರಾದ ಯೋಧರಿಗೆ ನಮನ ಸಲ್ಲಿಸಿದರು. ರೂ ಪ್ರಶಾಂತ್ ಕೋಡಿಬೈಲ್ ಧನ್ಯವಾದ ತಿಳಿಸಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ