ಸುಳ್ಯ: ಮಳೆ ರಜೆ ಸರಿದೂಗಿಸುವ ಸಲುವಾಗಿ ಶನಿವಾರ ದಿನ ಪೂರ್ತಿ ತರಗತಿ ನಡೆಸುವ ಆದೇಶವನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿ ರಮೇಶ್ ಬಿ.ಇ. ಮಾಹಿತಿ ನೀಡಿದ್ದಾರೆ.
ಮಳೆಯ ಸಂದರ್ಭದಲ್ಲಿ ಜಿಲ್ಲಾ ಹಂತದಿಂದ ರಜೆ ನೀಡಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗುವ ಸಂದರ್ಭಗಳು ಇರುವುದರಿಂದ ಮಳೆ ಸಂದರ್ಭದಲ್ಲಿ ನೀಡಿರುವ ರಜೆಯನ್ನು ತರಗತಿ ನಡೆಸಿ ಸರಿದೂಗಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಂತದ ಆದೇಶ ಅನುಸಾರ ಕ್ರಮಕೈಗೊಳ್ಳಲಾಗುವುದು. ಆದುದರಿಂದ ದಿನಾಂಕ 5-8-2023ರಿಂದ ಪೂರ್ಣ ದಿನ ತರಗತಿ ನಡೆಸುವಂತೆ ಸೂಚಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷ ಮಳೆ ಕಾರಣ ನೀಡಿದ್ದ ರಜೆಗಳನ್ನು ಸರಿದೂಗಿಸಲು ಶನಿವಾರ ದಿನ ಪೂರ್ತಿ ತರಗತಿಗಳು ನಡೆಯಲಿದೆ. ಈ ವರ್ಷ ಮಳೆಯ ಕಾರಣ 6 ದಿನ ರಜೆ ನೀಡಲಾಗಿತ್ತು. ಶನಿವಾರ ದಿನಗಳಂದು ಮಧ್ಯಾಹ್ನ ಬಳಿಕವೂ ಶಾಲೆಯಲ್ಲಿ ಪಾಠ ಮಾಡಿ ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿ ಆದೇಶ ಮಾಡಿತ್ತು.