ಹಾಸನ: ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ (Plastic Table) ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕ ವ್ಯಾಪಾರಿ ಮೇಲೆ ಕಳ್ಳತನದ ಆರೋಪ ಮಾಡಿ ಲಾಠಿಯಿಂದ ಹಲ್ಲೆ ಮಾಡಿದ ಘಟನೆ ಹಾಸನಲ್ಲಿ ನಡೆದಿದೆ. ಹಲ್ಲೆ ಮಾಡಿದ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯ ಹೆಡ್‍ಕಾನ್ಸ್ ಟೇಬಲ್ ಮಣಿಕುಮಾರ್ ನನ್ನು ಅಮಾನತು ಮಾಡಲಾಗಿದೆ. : ಗದಗ ಮೂಲದ ವ್ಯಾಪಾರಿ ಅರ್ಜುನ್ ಪ್ಲಾಸ್ಟಿಕ್ ಟೇಬಲ್ ವ್ಯಾಪಾರ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ರಸ್ತೆ ಬಳಿ ನಿಂತಿದ್ದ ಪೊಲೀಸ್ ಕಾನ್ಸ್ ಟೇಬಲ್ ಮಣಿಕುಮಾರ್, ಅರ್ಜುನ್‍ನನ್ನು ಕರೆದು ಒಂದು ಪ್ಲಾಸ್ಟಿಕ್ ಟೇಬಲ್‍ಗೆ ಎಷ್ಟು ಎಂದು ಕೇಳಿದ್ದಾರೆ. ಈ ವೇಳೆ ಅರ್ಜುನ್ 2,500 ರೂ. ಎಂದು ಹೇಳಿದ್ದಾನೆ. 1,800 ರೂ.ಗೆ ಪ್ಲಾಸ್ಟಿಕ್ ಟೇಬಲ್ ಕೊಡುವಂತೆ ಮಣಿಕುಮಾರ್ ಕೇಳಿದ್ದಾನೆ. ಅಷ್ಟು ಹಣಕ್ಕೆ ಬರಲ್ಲ ನೀವೇ ಒಂದು ರೇಟ್ ಹೇಳಿ ಪ್ಲಾಸ್ಟಿಕ್ ಟೇಬಲ್ ತೆಗೆದುಕೊಳ್ಳಿ ಎಂದು ಬಡ ವ್ಯಾಪಾರಿ ಅರ್ಜುನ್ ಹೇಳಿದ್ದಾನೆ. ಇದರಿಂದ ಕೋಪಗೊಂಡ ಮಣಿಕುಮಾರ್, ಯಸಳೂರಿನ ಕೆನರಾಬ್ಯಾಂಕ್‍ನ ಕಟ್ಟಡದ ಮೇಲೆ ಅರ್ಜುನ್‍ನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಪ್ಲಾಸ್ಟಿಕ್ ಟೇಬಲ್ ಕಳ್ಳತನ ಮಾಡಿಕೊಂಡು ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹಲ್ಲೆ ಮಾಡಿದ್ದಾನೆ. ಘಟನೆ ಸಂಬಂಧ ಮಣಿಕುಮಾರ್ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ (Yalasoor Police Station) ಅರ್ಜುನ್ ದೂರು ನೀಡಿದ್ದಾನೆ. ಸದ್ಯ ಮಣಿಕುಮಾರ್‍ನನ್ನು ಅಮಾನತುಗೊಳಿಸಿ ಎಸ್‍ಪಿ ಹರಿರಾಂ ಶಂಕರ್ (Hariram Shankar) ಆದೇಶ ಹೊರಡಿಸಿದ್ದಾರೆ. ಯಸಳೂರಿನಲ್ಲಿ ಮಣಿಕುಮಾರ್ ಸಾರ್ವಜನಿಕರೊಂದಿಗೆ ಕೂಡ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ