ಸುಮಾರು 25 ವರ್ಷಗಳಿಂದ ಸುಳ್ಯ ತಾಲೂಕಿನಾದ್ಯಂತ ಗುರುತಿಸಲ್ಪಟ್ಟ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಂಘಟನೆಯು ಹಲವಾರು ಸಮಾಜಿಕ, ಶೈಕ್ಷಣಿಕ, ಹಾಗೂ ಕ್ರೀಡೆ ಮುಂತಾದ ಹಲವಾರು ಕಾರ್ಯಕ್ರಮ ನಡೆಸಿ ಬರುತ್ತಿದ್ದು. ಇದೀಗ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಾದಕ ದ್ರವ್ಯ ಸೇವನೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕುಟುಂಬಗಳ ಮೇಲೆ ಗಣನೀಯ ಮತ್ತು ಪರಸ್ಪರ ಪ್ರಭಾವವನ್ನು ಹೊಂದಿದೆ.

ಮಾದಕ ದೃವ್ಯ ಸೇವನೆಯಿಂದ ಜೀವನ ನಾಶವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ವಿಧ್ಯಾರ್ಥಿಗಳು ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ಸದೃಢ ಭವಿಷ್ಯದ ಬಗ್ಗೆ ಗಮನಹರಿಸುವ ಪರವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಂಡ ಮಾದಕ ವ್ಯಸನಗಳಿಂದ ದೂರ ಸರಿಯಿರಿ ಎಂಬ ಅಭಿಯಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಸುಳ್ಯ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಈರಯ್ಯ ದಂತೂರ್ ರವರು ಪೋಸ್ಟರ್ ಬಿಡುಗಡೆ ಮಾಡಿದರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ರಿಫಾಯಿ ಎಸ್.ಎ. ಕಾರ್ಯದರ್ಶಿ ಸಾಲಿ 5*, ನಾಸಿರ್ ಕೆ.ಪಿ, ಸಿರಾಜ್ ಎಸ್.ಪಿ, ಬಾತಿಶಾ ಬಿ.ಎಮ್ ಉಪಸ್ಥಿತಿಯಿದ್ದರು.