ಸುಳ್ಯ: ಅಸ್ತ್ರ ಸ್ಪೋರ್ಟ್ ಕ್ಲಬ್ ಪೈಚಾರ್ 26ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು, ರಿಫಾಯಿ ಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ 11ರಂದು ಪೈಚಾರಿನಲ್ಲಿ ನೆರವೇರಿತು. ಹಾಗೂ ಅಸ್ತ್ರ ಸ್ಪೋರ್ಟ್ಸ್ ನ ನೂತನ ಅಧ್ಯಕ್ಷರಾಗಿ ಲತೀಫ್ ಟಿ ಏ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಾಫಿ ಪ್ರಗತಿಯವರನ್ನು ಮುಂದುವರಿಸಿಲಾಯಿತು. ಉಪಾಧ್ಯಕ್ಷರಾಗಿ ಇಬ್ರಾಹಿಂ ಎಸ್. ಎ ಶಾಂತಿನಗರ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಬೊಳುಬೈಲ್, ಜೊತೆ ಕಾರ್ಯದರ್ಶಿಯಾಗಿ ಮುಜೀಬ್, ಕೋಶಾಧಿಕಾರಿಯಾಗಿ ಬಶೀರ್ ಆರ್‌.ಬಿ ಸದಸ್ಯರಾಗಿ ಸಿಯಾಬ್ ಬೆಟ್ಟಂಬಾಡಿ, ಸವಾದ್, ಶರೀಕ್, ಆರಿಸ್, ಫಲುಲುದ್ದೀನ್ , ಅರ್ಷಾದ್, ಅಶ್ರಫ್, ಜುನೈದ್ ಅವರನ್ನು ಆಯ್ಕೆ ಮಾಡಲಾಯಿತು. 23ನೇ ಸಾಲಿನ ಅಧ್ಯಕ್ಷರಾದ


ರಿಫಾಯಿ ಯವರು ಮಾತನಾಡಿ ಸುಮಾರು ₹2 ಲಕ್ಷದ 23 ಸಾವಿರ ಖರ್ಚನ್ನು ವಿವರಿಸಿದರು. ಬಡ ರೋಗಿಗಳಿಗೆ ₹52 ಸಾವಿರ ಧನಸಹಾಯ, ಬಡ ಶಾಲಾ ಮಕ್ಕಳಿಗೆ ₹28 ಸಾವಿರ, ಬಡ ಹೆಣ್ಣುಮಕ್ಕಳ ವಿವಾಹಕ್ಕೆ ₹72 ಧನಸಹಾಯ ನೀಡಿರುವು ಕುರಿತು ತಿಳಿಸಿದರು. ಪ್ರಸ್ತುತ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲತೀಫ್’ರವರು ಮಾತನಾಡಿ ಮುಂದಿನ ದಿನಗಳಲ್ಲಿ ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಬಡ ರೋಗಿಗಳಿಗೆ ಸಹಾಯಧನ, ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸಹಾಯಧನ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಬಶೀರ್ ಆರ್.ಬಿ ಸ್ವಾಗತಿಸಿ, ಸಿರಾಜ್ ಎಸ್ ಪಿ ಯವರು ವಂದಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ