ಗುತ್ತಿಗಾರು: ದೇಶದ76 ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಮತ್ತು ಮಂಗಳೂರು, ಗ್ರಾಮ ಪಂಚಾಯತ್ ಗುತ್ತಿಗಾರು, ಸರಕಾರಿ ಅರೋಗ್ಯ ಕೇಂದ್ರ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ವತಿಯಿಂದ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಅತಿಥಿಗಳಾದ, ಪಿ. ಬಿ. ಸುಧಾಕರ್ ರೈ ಸಭಾಪತಿಗಳು , ವೆಂಕಟ್ ದಂಬೆಕೋಡಿ ಅಧ್ಯಕ್ಷರು ಪಿ ಎ ಸಿ ಬ್ಯಾಂಕ್ ಗುತ್ತಿಗಾರು. ವೆಂಕಟ್ ವಳಲಂಬೆ ಸದಸ್ಯರು ಗ್ರಾಮ ಪಂಚಾಯತ್ ಗುತ್ತಿಗಾರು. ಮುಳಿಯ ಕೇಶವ ಭಟ್, ನಿರ್ದೇಶಕರು ಪಿ. ಎ. ಸಿ. ಬ್ಯಾಂಕ್ ಗುತ್ತಿಗಾರು. ಅಶೋಕ್ ನೆಕ್ರಾಜೆ ಅಧ್ಯಕ್ಷರು ಅಭಯ ಚಾರಿಟೇಬಲ್ ಟ್ರಸ್ಟ್ ರಿ ಸುಬ್ರಹ್ಮಣ್ಯ. ಬಿ ಧನಪತಿ. ಪಿ. ಡಿ. ಓ. ಗುತ್ತಿಗಾರು. ಮೋಹನ್ ಆಚಾರ್ಯ ಅಧ್ಯಕ್ಷರು ಲಯನ್ಸ್ ಕ್ಲಬ್ ಹಿರಿಯಡ್ಕ, ಶ್ರೀ ಮತಿ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು ಅವರುಗಳು ಜೊತೆಯಾಗಿ ಉದ್ಘಾಟನೆ ಮಾಡಿದರು. ರಕ್ತದಾನ ಶಿಬಿರದದಲ್ಲಿ ವಿಶೇಷವಾಗಿ ಯುವ ಸಮುದಾಯ ಪ್ರಥಮ ಬಾರಿಗೆ ರಕ್ತದಾನಿಗಳದರು ಸಮಾಜದ ಹಿರಿಯರಾದ ಮುಳಿಯ ಕೇಶವ ಭಟ್ ವೆಂಕಟ್ ದಂಬೆಕೋಡಿ, ವಿನಯ್ ಬೆಳ್ಳಾರೆ, ಹರೀಶ್ ಮತ್ತು ದಿವ್ಯಾ ದಂಪತಿಗಳು ಛತ್ರಪ್ಪಾಡಿ, ನಿವೃತ್ತ ಸೈನಿಕ ರಾದ ಮಹೇಶ್ ಮತ್ತು ಅನಿತಾ ದಂಪತಿಗಳು, ಅರೋಗ್ಯ ಇಲಾಖಾ ಸಿಬ್ಬಂದಿ ಬಸವರಾಜ್,ಪಿ. ಡಿ. ಓ.ಬಿ ದನಪತಿ. ಆಕಾಶ್ ಗುತ್ತಿಗಾರ್ ಬೀಟ್ ಪೊಲೀಸ್,ರಕ್ತದಾನ ಮಾಡುವ ಮೂಲಕ ಮಾದರಿಯದರು. ಈ ಸಂದರ್ಭದಲ್ಲಿ ಅರೋಗ್ಯ ಇಲಾಖಾ ವತಿಯಿಂದ ಆಶಾ ಕಾರ್ಯಕರ್ತೆಯರಾದ ಕುಸುಮಾವತಿ ಮತ್ತು ಜಯಲಕ್ಷ್ಮಿ ಬಳ್ಳಕ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಅಕ್ಷಯ್ ಯೋಗೀಶ್ ಹೊಸೋಲಿಕೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಹವೀಕ್ಷ ಯಸ್. ಆರ್. ಪ್ರಾರ್ಥನೆ ನೆರವೇರಿಸಿದರು.ರಕ್ತದಾನ ಮಾಡಿದ 64 ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಶ್ರೀ ಅಕ್ಷಯ್ ಕೆ. ಸಿ. ಪ್ರಧಾನ ಕಾರ್ಯದರ್ಶಿಗಳು. ಅ. ಲಿ. ಎಜುಕೇಷನ್ ಟ್ರಸ್ಟ್ ರಿ ಸುಳ್ಯ. ಶ್ರೀ ದಿವಾಕರ ಕೊಂಬೆಟ್ಟು ಜೂನಿಯರ್ ಎಂಜಿನಿಯರ್ ನಗರ ಸಭೆ ಉಡುಪಿ ಸಹಕಾರ ನೀಡಿದ್ದರು.
Advertisement
Advertisement