ಸುಳ್ಯ: ದೀಪಾಂಜಲಿ ಮಹಿಳಾ ಮಂಡಲ (ರಿ) ಶಾಂತಿನಗರ ವತಿಯಿಂದ ‘ಆಟಿ ಉತ್ಸವ’ ಕಾರ್ಯಕ್ರಮವು ದಿನಾಂಕ ಆಗಸ್ಟ್13 ರಂದು ಶಾಂತಿನಗರ ಶಾಲಾ ರಂಗಮಂದಿರದಲ್ಲಿ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್’ಡಿಎಂಸಿ ಅಧ್ಯಕ್ಷರಾದ ಶ್ರೀ ನಝೀರ್ ಶಾಂತಿನಗರ ವಹಿಸಿದರು. ಶ್ರೀಮತಿ ದೇವಕಿ ಬಿ ಇವರ ದೇವರ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಚೆನ್ನೆಮಣೆ’ ಆಟದ ಮೂಲಕ ಕಾರ್ಯಕ್ರಮವನ್ನು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ತುಳಸಿ ಉದ್ಘಾಟಿಸಿ, ಶುಭ ಹಾರೈಸಿದರು. ಆಟಿ ಆಚರಣೆಯ ಬಗೆ ಸವಿಸ್ತಾರವಾಗಿ ಶ್ರೀಮತಿ ರಮಾ ವೈ.ಕೆ ನಿವೃತ್ತ ಪ್ರಾಂಶುಪಾಲರು ತಿಳಿಸಿದರು. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ದೀಪಾಂಜಲಿ ಭಜನಾ ಮಂಡಲ ಅಧ್ಯಕ್ಷೆ ಶ್ರೀಮತಿ ಹರ್ಷಕರುಣಾಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಬಿಂದು ಚಂದ್ರನ್ ಉಪಸ್ಥಿತರಿದ್ದರು. ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಲಲಿತಾ ಎಂ ಧನ್ಯವಾದ ತಿಳಿಸಿದರು. ಈ ಒಂದು ಕಾರ್ಯ
ಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಆಟಿಯ ತಿಂಡಿಗಳನ್ನು ವಿತರಿಸಲಾಯಿತು. ಕೊನೆಗೆ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Advertisement
Advertisement