ಪುತ್ತೂರು: ಬೈಪಾಸ್ ರಸ್ತೆಯಲ್ಲಿ ಆಲ್ಟೊ ಕೆ10 ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು, ಮೂವರು ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತಪಟ್ಟವರನ್ನು ಸುಳ್ಯ ಮೂಲದ ಅಣ್ಣು ನಾಯ್ಕ್, ಚಿದಾನಂದ ನಾಯ್ಕ್, ರಮೇಶ್ ನಾಯ್ಕ್, ಎಂದು ತಿಳಿದು ಬಂದಿದೆ. ಮತ್ತೋರ್ವನ ಮಾಹಿತಿ ತಿಳಿಯಬೇಕಷ್ಟೆ
ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯಲ್ಲೇ ಘಟನೆ ನಡೆದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.