ಸುಳ್ಯ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಶಾಲಾ ಎಸ್’ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರ ಧ್ವಜಾರೋಹಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಪೈಚಾರ್ ವರೆಗೂ ಸ್ವಾತಂತ್ರ್ಯ ಜಾಥ ಹಮ್ಮಿಕೊಳ್ಳಲಾಯಿತು ಈ ಜಾಥಾದಲ್ಲಿ ಊರಿನವರು, ಪೋಷಕರು ಪಾಲ್ಗೊಂಡರು. ಮುಂದೆ ಸಭಾ ಕಾರ್ಯಕ್ರಮ ನಡೆಯಿತು, ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ನಝೀರ್ ಶಾಂತಿನಗರ ವಹಿಸಿದರು. ಹಾಗು ಮಕ್ಕಳಿಗೆ ಧತ್ತಿನಿಧಿ ವಿತರಿಸಲಾಯಿತು.

ವೇದಿಕೆಯಲ್ಲಿ ಊರಿನ ಹಿರಿಯ ಶ್ರೀ ವ್ಯಕ್ತಿ ಗೋಪಾಲ ಕೃಷ್ಣ ಭಟ್, ಶ್ರೀ ಅಬೂಬಕರ್, ಮಾಜಿ ಭಾರತೀಯ ಸೈನಿಕ ಶ್ರೀ ಚಂದ್ರಹಾಸ, ಶ್ರೀ ಗಣೇಶ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ, ಅಸ್ತ್ರ ಸ್ಪೋರ್ಟ್ಸ್ ಅಧ್ಯಕ್ಷ ಶ್ರೀ ಲತೀಫ್ ಟಿ.ಎ, ಹಿಂದೂ ಜಾಗರಣ ವೇದಿಕೆ ಸ್ಥಾಪಕ ಶ್ರೀ ದಾಮೋದರ ಮಂಚಿ, ದೀಪಾಂಜಲಿ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಹರ್ಷಕರುಣಾಕರ, ಅಸ್ತ್ರ ಸ್ಪೋರ್ಟ್ಸ್ ಕೋಶಾಧಿಕಾರಿ ಶ್ರೀ ಬಶೀರ್ ಆರ್.ಬಿ, ಶಾಲಾ ದೈಹಿಕ ಶಿಕ್ಷಕ ರಘುನಾಥ ಉಪಸ್ಥಿತರಿದ್ದರು.

ಇದೇ ವೇಳೆ ದೀಪಾಂಜಲಿ ಮಹಿಳಾ ಮಂಡಲ ವತಿಯಿಂದ ಶಾಲೆಯ ರಂಗಮಂದಿರ ಕ್ಕೆ ಸುಸಜ್ಜಿತವಾದ ಗೇಟ್ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆಯನ್ನು ನೀಡಿದರು, ಅದೇ ರೀತಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್‌ ಪೈಚಾರ್ ವತಿಯಿಂದ ಶಾಲೆಯ ಹಾಲ್ ಗೆ ಟೈಲ್ಸ್ ಅಳವಡಿಸಿ ಸುಸಜ್ಜಿತ ಹಾಲ್ ಮಾಡುತ್ತೇವೆ ಎಂದು ಭರವಸೆ ಇತ್ತರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನನದ ಭೋಜನ ವ್ಯವಸ್ಥೆ ಯನ್ನು ಶಂಕರ ಶಾಂತಿನಗರ ನೀಡಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ