Advertisement
ಸುಳ್ಯ : ಪ್ಲಾಸ್ಟಿಕ್ ಚೀಲ ಬಳಸಬಾರದು ಅನ್ನುವ ಸರ್ಕಾರದ ನಿಯಮವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ತುಂಬಿಸಿಕೊಂಡು ಸುಳ್ಯಕ್ಕೆ ಬಂದ ಓಮ್ನಿ ಕಾರನ್ನು ಮಾಲು ಸಮೇತ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಶನಿವಾರ (ಆಗಸ್ಟ್ 19) ರಂದು ಕೆ.ವಿ.ಜಿ ಕ್ಯಾಂಪಸ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ಲಾಸ್ಟಿಕ್ ಅನ್ನೋದು ನಗರದಲ್ಲಿ ಬಹುದೊಡ್ಡ ಸಮಸ್ಯೆ ಕೂಡಾ. ಈ ಕಾರಣಕ್ಕೆ ವರ್ತಕರು ಯಾರೂ ಕೂಡ ಪ್ಲಾಸ್ಟಿಕ್ ಬಳಸಬಾರದು ಎಂದು ಸೂಚಿಸಲಾಗಿತ್ತು. ಆದರೆ ಕೆಲವರು ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲವನ್ನು ತಂದು ಗ್ರಾಹಕರಿಗೆ ಕೊಡುತ್ತಿದ್ದರು.
ಇದೀಗ ಓಮ್ನಿಯಲ್ಲಿ ಇದ್ದ ಇಬ್ಬರನ್ನು ಕೂಡ ನಗರ ಪಂಚಾಯತ್ ಬಳಿ ಕರೆದುಕೊಂಡು ಬರಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಲಾಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ತಿಳಿಸಿದ್ದಾರೆ.
Advertisement