Advertisement

ಕಲ್ಲುಗುಂಡಿ ಭಾಗದಲ್ಲಿ ಸುಮಾರು ಹದಿನೈದು ವರುಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಳ್ಯ ತಾಲ್ಲೂಕಿನ ಸಂಪಾಜೆ ಗ್ರಾಮದ ಆಪತ್ಭಾಂಧವನೆಂದೇ ಖ್ಯಾತಿ ಪಡೆದ ತಾಜುದ್ಧೀನ್ ಟರ್ಲಿಯವರಿಗೆ ‘ಎಶಿಯಾ ವೈಧಿಕ್ ಕಲ್ಚರಲ್ ಯೂನಿವರ್ಸಿಟಿ ಚೆನ್ನೈ’ ಯಿಂದ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರು ಹೊರವಲಯದ ಹೊಸೂರಿನ ಕ್ಲಾರೆಷ್ಟಾ ಹೋಟೇಲಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು.
ಪ್ರಸ್ತುತ ಹೋಟೇಲ್ ಉದ್ಯಮ ನಡೆಸುತ್ತಿರುವ
ಇವರು ಗೂನಡ್ಕದ ತೆಕ್ಕಿಲ್ ಮನೆತನದ ಟರ್ಲಿ ಇಬ್ರಾಹಿಂ ಮತ್ತು ಕಲ್ಲುಗುಂಡಿ ಕಡೆಪಾಲದ ಸೊಸೈಟಿ ಮನೆತನದ ದೈನಾಬಿ ಯವರ ಮೂರನೇಯ ಪುತ್ರ.
ಇವರು ತುರ್ತು ಪರಿಸ್ಥಿತಿ, ಪ್ರಳಯ, ಭೂಕುಸಿತ, ಕೋವಿಡ್, ರಕ್ತದಾನ ಬಳಗ , ಅನಾಥ ಶವಗಳ ದಫನ ಕಾರ್ಯ, ಅಪಘಾತಗಳಿಗೆ ತುರ್ತು ಸ್ಪಂದನೆ, ಮುಂತಾದ ಕೆಲಸಗಳಲ್ಲಿ ತಮ್ಮನ್ನು ತಾನು ತೊಡಗಿಸಿ ಕ್ಕೊಂಡಿದ್ದರು. ಈ ಮೊದಲು ಪಡೆದ ಹಲವಾರು ಸಂಘ ಸಂಸ್ಥೆಯ ಪ್ರಶಸ್ತಿ ಗಳಿಗೆ ಭಾಜಕರಾಗಿದ್ದು ಅಲ್ಲದೆ
ಯುವ ಶಕ್ತಿ ಕರ್ನಾಟಕ ಇದರ ರಕ್ತದಾನ ಬಳಗದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿ ಅಲ್ಲದೆ
ಹಲವಾರು ಸಂಘಟನೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿ ಕ್ಕೊಂಡಿರುವ ಇವರು ಪ್ರಸ್ತುತ
KMCC ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ
SKSSF ವಿಖಾಯ ಇದರ ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ.
ಸುದ್ಧಿ ಬಿಡುಗಡೆಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ