Advertisement
ರಾಮನಗರ, ಆ.22: ಸಾವು ಹೇಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹೌದು, ಅದರಂತೆ ಕೆಲಸಕ್ಕೆ ಬಿಡುವು ತೆ್ಗೆದುಕೊಂಡು ಎಂಜಾಯ್ ಮಾಡಲು ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ಗೆ (Ramanagara Wonderla Amusement Park) ತೆರಳಿದ್ದ ವ್ಯಕ್ತಿಯು, ಮೇಲಿಂದ ಬಿದ್ದು ಸಾವನ್ನಪ್ಪಿದ್ದ ಧಾರುಣ ಘಟನೆ ನಿನ್ನೆ(ಆ.21) ನಡೆದಿದೆ. ಜಡೇನಹಳ್ಳಿ ನಿವಾಸಿ ರಾಜು(35) ಮೃತ ದುರ್ದೈವಿ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
Advertisement