ಕುರುಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ನೂತನ ಪ್ರಾಂಶುಪಾಲರಾಗಿ ಅಣ್ಣಯ್ಯ ಕೆ ಹಾಗೂ ಉಪ ಪ್ರಾಂಶುಪಾಲರಾಗಿ ಹರೀಶ್ ಕುಮಾರ್ ಪಿ ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು.
ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಅಣ್ಣಯ್ಯ ಕೆ ಕಡಬ ತಾಲೂಕು, ಕುಂತೂರು ಗ್ರಾಮದ ಕುಂಡಡ್ಕ ಬಾಬುಗೌಡ ಮತ್ತು ಪೊನ್ನಕ್ಕ ದಂಪತಿಗಳ ಪುತ್ರರಾಗಿದ್ದು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪದವೀಧರ. ಇವರು 1988 ರಲ್ಲಿ ಕೆವಿಜಿ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಕಳೆದ ಫೆಬ್ರವರಿ 2024 ರಿಂದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ
ಉಪ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಹರೀಶ್ ಕುಮಾರ್ ಪಿ ಐವರ್ನಾಡು ಗ್ರಾಮದ ನಿಡುಬೆ ಪೂಜಾರಿ ಮನೆ ಕೊರಗಪ್ಪ ಗೌಡ ಮತ್ತು ಭವಾನಿ ದಂಪತಿಗಳ ಪುತ್ರ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು 2000ನೇ ಇಸವಿಯಿಂದ ಕೆವಿಜಿ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗದ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು ನಂತರ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಪ್ರಸ್ತುತ ಉಪ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ,ನಿರ್ಗಮಿತ ಪ್ರಾಂಶುಪಾಲ ಶ್ರೀಧರ್ ಎಂ. ಕೆ, ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಯಶೋದಾ ರಾಮಚಂದ್ರ, ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ, ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಮನೋಜ್, ಐಟಿಐ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಇಂಜಿನಿಯರಿಂಗ್ ಕಾಲೇಜಿನ ಮುದ್ದಪ್ಪ, ಕೆ.ವಿ.ಜಿ.ಪಾಲಿಟೆಕ್ನಿಕ್ ನ ಎಲ್ಲಾ ವಿಭಾಗ ಮುಖ್ಯಸ್ಥರುಗಳು, ಸಿಬ್ಬಂದಿಗಳು,
ಕಚೇರಿ ಅಧೀಕ್ಷಕರುಗಳಾದ ಧನಂಜಯ ಕಲ್ಲುಗದ್ದೆ, ಶಿವರಾಮ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.