ನವದೆಹಲಿ : ಅಕ್ಸಾ ಏರ್ ಬಳಿಕ ಭಾರತಕ್ಕೆ ಮತ್ತೊಂದು ಹೊಸ ಏರ್ಲೈನ್ ಸೇರ್ಪಡೆಯಾಗಿದೆ. 2025ರ ದ್ವಿತೀಯಾರ್ಧದಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಕೇರಳ ಕಾರ್ಯಾರಂಭ ಮಾಡಲಿದೆ ಎಂದು ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್ಪೋರ್ಟ್ ಎಂಡಿ ಸಿ ದಿನೇಶ್ ಕುಮಾರ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೋಮವಾರ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒಪ್ಪಂದ ಪತ್ರಕ್ಕೆ ಏರ್ ಕೇರಳ ಸಿಇಒ ಹರೀಶ್ ಕುಟ್ಟಿ ಮತ್ತು ಕಣ್ಣೂರು ಏರ್ಪೋರ್ಟ್ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಶ್ವಿನಿ ಕುಮಾರ್ ಸಹಿ ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್ಪೋರ್ಟ್ ಎಂಡಿ ಸಿ ದಿನೇಶ್ ಕುಮಾರ್ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.